Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಗ್ಗಲೂರು ಬ್ಯಾರೇಜ್ ದೇವೇಗೌಡರ ಕೊಡುಗೆಯಲ್ಲ ಎನ್ನುವ ಕಾಂಗ್ರೆಸಿಗರೇ ನಾಚಿಕೆಯಾಗಬೇಕು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಇಗ್ಗಲೂರು ಬ್ಯಾರೇಜ್" ಹೆಚ್‌.ಡಿ. ದೇವೇಗೌಡರ ಕೊಡುಗೆಯಲ್ಲ ಎನ್ನುತ್ತಿರುವ ಕಾಂಗ್ರೆಸಿಗರೇ ನಿಮಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಕಿರಿ ಕಾರಿದೆ.


ಅಂದು ಚನ್ನಪಟ್ಟಣ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಮುದ್ರಿಸಿದ್ದ ಈ ಆಹ್ವಾನ ಪತ್ರಿಕೆಗಳೇ ಸಾಕ್ಷಿ. ನಿಮ್ಮ ಸುಳ್ಳು ಪ್ರಚಾರಗಳಿಗೆ ಆಯಸ್ಸು ಕಮ್ಮಿ, ನೆನಪಿರಲಿ ಎಂದು ಜೆಡಿಎಸ್ ಎಚ್ಚರಿಸಿದೆ.

ಈಗಿನ ಕಾಂಗ್ರೆಸಿನವರಂತೆ ವಿರೋಧ ಪಕ್ಷಗಳ ನಾಯಕರುಗಳನ್ನು ಕಡೆಗಣಿಸದೆ ಆ ಪ್ರದೇಶದ ವ್ಯಾಪ್ತಿಯ ಎಲ್ಲಾ ಚುನಾಯಿತ ಸದಸ್ಯರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಶಿಷ್ಟಾಚಾರವನ್ನು ಅಚ್ಚುಕಟ್ಟಾಗಿ ಪಾಲಿಸುವಂತೆ ನೋಡಿಕೊಂಡಿದ್ದರು ನಮ್ಮ ವರದೇಗೌಡರು.

ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿರುವ ಮಹಾನುಭಾವನಿಗೆ ಮತ್ತು ಆಹ್ವಾನ ಪತ್ರಿಕೆಯಲ್ಲಿರುವ ಕನಕಪುರದ ನಾಯಕನಿಗೆ ಆತ್ಮಸಾಕ್ಷಿ ಎನ್ನುವುದಿದ್ದರೆ ಇಗ್ಗಲೂರು ಬ್ಯಾರೇಜ್ ವಿಚಾರವಾಗಿ ದೇವೇಗೌಡರ ವಿರುದ್ಧ ಮಾತನಾಡುತ್ತಿರಲಿಲ್ಲ.

ಖುದ್ದಾಗಿ ದೇವೇಗೌಡರೇ ಇಗ್ಗಲೂರು ಕಾಮಗಾರಿ ನಡೆಯುತ್ತಿದ್ದ ಸ್ಥಳ ವೀಕ್ಷಿಸಲು ಪಂಚೆ ಎತ್ತಿ ಕಾಲುವೆಗಿಳಿದಿದ್ದರು. ಅದನ್ನು ಈಗಿನ ಕಾಂಗ್ರೆಸ್ಸಿಗರು ಮರೆತಿರಬಹುದಷ್ಟೆ.

ಇಗ್ಗಲೂರು ಬ್ಯಾರೇಜ್ ದೇವೇಗೌಡರ ದೂರದೃ‌ಷ್ಟಿ ಹಾಗೂ ಶ್ರಮದ ಫಲ ಎಂಬ ಸತ್ಯವನ್ನು ಈ ಫೋಟೋಗಳೇ ಹೇಳುತ್ತವೆ ಎಂದು jds ಕಾಂಗ್ರೆಸ್ ನಾಯಕರನ್ನು ಟೀಕಿಸಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST