Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಶಾರದಾಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ಸೇರಿದಂತೆ ಹದಿನೈದು ಕಾರ್ಮಿಕ ಕುಟುಂಬಗಳಿಗೆ ಶ್ರೀಶಾರದಾಶ್ರಮದಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ಆಶ್ರಮದ ಸ್ವಯಂಸೇವಕರು ಎಲ್ಲಾ ಕಾರ್ಮಿಕರಿಗೆ ಪೂಜೆ ಮತ್ತು ಆರತಿ ನೆರವೇರಿಸಿ ವಿತರಿಸಿದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಿಟ್ ಗಳನ್ನು ವಿತರಿಸಿ  ಆಶೀರ್ವಚನ ನೀಡಿದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಆಶ್ರಮದಿಂದ ಪ್ರತಿ ತಿಂಗಳು ಸ್ವಾಮಿ ವಿವೇಕಾನಂದರ ಜೀವ ಶಿವ ಸೇವಾ ಕಾರ್ಯಕ್ರಮದ ಅಂಗವಾಗಿ ಬಡ-ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ.

ಈ ಬಾರಿ ಶ್ರೀಶಾರದಾಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ರಾಗಿ,ಗೋಧಿ, ಬೇಳೆ,ಬೆಲ್ಲ, ಎಣ್ಣೆ,ಸೋಪು ಸೇರಿದಂತೆ ದಿನಬಳಕೆಯ ವಸ್ತುಗಳು ಒಳಗೊಂಡ  ಕಿಟ್ ಗಳನ್ನು ಆಶ್ರಮದ ಭಕ್ತರ ಉದಾರ ಆರ್ಥಿಕ ನೆರವಿನಿಂದ ನೀಡಲಾಗುತ್ತಿದೆ.

ಕಾರ್ಮಿಕರು ಈ ವಸ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ, ಧ್ಯಾನಾಭ್ಯಾಸ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.


ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಸದ್ಭಕ್ತರಾದ ಎಚ್ ಲಕ್ಷ್ಮೀದೇವಮ್ಮ , ನೇತಾಜಿ ಪ್ರಸನ್ನ, ರಮೇಶ್,ಎಂ ಗೀತಾ ನಾಗರಾಜ್, ಡಾ.ಸಿ‌.ಟಿ.ಬಸವರಾಜಪ್ಪ, ಡಾ.ಲಾವಣ್ಯ,‌ಪಿ.ಎಸ್.ಮಾಣಿಕ್ಯ, ವನಜಾಕ್ಷಿ,ಬೊಮ್ಮಕ್ಕ,ಪೂಜಾ, ನಾಗರತ್ನಮ್ಮ, ರಾಘವೇಂದ್ರ, ಮಂಜುಳಾ, ದ್ರಾಕ್ಷಾಯಣಿ, ಡಿ‌.ಕಾವೇರಿ, ಸಿ.ಎಸ್.ಭಾರತಿ, ಕವಿತಾ, ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕ ಸೇರಿದಂತೆ ಕಾರ್ಮಿಕರು, ಸದ್ಭಕ್ತರು ಹಾಗೂ ಬಾಪೂಜಿ ಆರ್ಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಹಿತಿ ಜಬೀವುಲ್ಲಾ ಎಂ. ಅಸದ್ ಅವರಿಗೆ ಒಲಿದ ರಾಷ್ಟ್ರೀಯ ಗಜಲ್ ಸಿರಿ ಪ್ರಶಸ್ತಿಯ ಗರಿಬೆಂಗಳೂರಿನಿಂದ ಲಡಾಖ್‌ಗೆ ಆಟೋ ಪಯಣ: 8,900 ಕಿ.ಮೀ ಕ್ರಮಿಸಿ ಇತಿಹಾಸ ಬರೆದ ಕನ್ನಡಿಗ!ಬಾಗಿದ ಸರ್ಕಾರಕ್ಕೆ ವಿಜಯೇಂದ್ರ ಪಾದಯಾತ್ರೆ ಪೆಟ್ಟು: ರಾಯಚೂರು-ಬಳ್ಳಾರಿ ಪಾದಯಾತ್ರೆ 4ನೇ ದಿನಕ್ಕೆ!ಕೊಟ್ಟೂರು ಜನತೆಗೆ ರೈಲ್ವೆ ಇಲಾಖೆಯ ಬಿಗ್ ಗಿಫ್ಟ್: ಮೈಸೂರು–ಅಜ್ಮೀರ್ ನಡುವೆ ನೂತನ ರೈಲು ಸಂಚಾರ ಪ್ರಾರಂಭ!ಸೆಪ್ಟೆಂಬರ್ 5ಕ್ಕೆ ಯಶವಂತಪುರ–ಮಂಗಳೂರು ವಂದೇ ಭಾರತ್‌: 16 ಬೋಗಿಗಳ ಪ್ರಾಯೋಗಿಕ ಸಂಚಾರ!ಮೈಸೂರು ದಸರಾ: ದಕ್ಷಿಣ ಭಾರತದ ಸಿಎಂಗಳಿಗೆ ಆಹ್ವಾನ, ಏರ್ ಶೋ ಹಾಗೂ ಡ್ರೋನ್ ಶೋ ವಿಶೇಷ ಆಕರ್ಷಣೆ!ಇಸ್ರೋ ಮತ್ತೊಂದು ಮೈಲಿಗಲ್ಲು: ಅತ್ಯಾಧುನಿಕ 'EOS-05' ಉಪಗ್ರಹ ಯಶಸ್ವಿ ಉಡಾವಣೆ!ಬರ ಎದುರಿಸಲು ಸರ್ಕಾರ ಸನ್ನದ್ಧ: 'ಮೋಡ ಬಿತ್ತನೆ'ಗೆ ಚಾಲನೆ!ವಿಪಕ್ಷಗಳ ನಾಲಗೆ ಹತೋಟಿಯಲ್ಲಿರಲಿ-ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ!ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಶಾಸಕ ಸುರೇಶ್ ಗೌಡ ಪುತ್ರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್!