E-PAPER
26 Nov 2026, 09:06:03 PM|
Gold₹12128/gGold24K ₹12,128/g - 22K ₹11,107/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಚಪ್ಪಲಿ ವಿಚಾರಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ: ಓರ್ವನಿಗೆ ಗಾಯ, ವಿಡಿಯೋ ವೈರಲ್!

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಪ್ಪಲಿ ಬದಲಾಯಿಸಿಕೊಂಡ ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ತೀವ್ರ ಮಾರಾಮಾರಿ ನಡೆದಿದ್ದು
, ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳ ಬಡಿದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಘಟನೆಯ ಹಿನ್ನೆಲೆ: ನಗರದ ಹೊರವಲಯದ ಪಾವಗಡ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ (ಬಿಸಿಎಂ ಹಾಸ್ಟೆಲ್) ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ. ಪಿಯುಸಿ ವಿದ್ಯಾರ್ಥಿ ಪ್ರಸನ್ನ ಮತ್ತು ಐಟಿಐ ವಿದ್ಯಾರ್ಥಿ ಹರ್ಷ ಎಂಬುವವರ ನಡುವೆ ಚಪ್ಪಲಿ ಬದಲಾದ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದೆ. ನೋಡನೋಡುತ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಬಿಇಡಿ ವಿದ್ಯಾರ್ಥಿ ರವೀಂದ್ರ ಹಾಗೂ ಇತರೆ ಸ್ನೇಹಿತರು ಮತ್ತು ಹರ್ಷನ ಗುಂಪಿನ ನಡುವೆ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಹೊರಗಿನವರನ್ನು ಕರೆಸಿ ಹಲ್ಲೆ ಆರೋಪ: ಜಗಳ ತಾರಕಕ್ಕೇರಿದಾಗ ಗಲಾಟೆ ಬಿಡಿಸಲು ಮಧ್ಯಪ್ರವೇಶಿಸಿದ ವೀರೇಂದ್ರ ಎಂಬ ವಿದ್ಯಾರ್ಥಿಯ ಮೇಲೆ ಯುವಕರ ಗುಂಪು ಮನಸೋಇಚ್ಛೆ ಹಲ್ಲೆ ನಡೆಸಿದೆ. ಘಟನೆಯಲ್ಲಿ ವೀರೇಂದ್ರ ಗಾಯಗೊಂಡಿದ್ದು, ಸದ್ಯ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಹರ್ಷ ಹೊರಗಡೆಯಿಂದ ತನ್ನ ಸ್ನೇಹಿತರನ್ನು ಹಾಸ್ಟೆಲ್‌ಗೆ ಕರೆಸಿ ಹಲ್ಲೆ ನಡೆಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಬಡಿದಾಟದ ವಿಚಾರ ತಿಳಿಯುತ್ತಿದ್ದಂತೆಯೇ ಬಿಸಿಎಂ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ) ಅಧಿಕಾರಿ ರಮೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಂದ ಘಟನೆಯ ಸಂಪೂರ್ಣ ವಿವರ ಪಡೆದಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದಲ್ಲಿ ತ್ರಿಮೂರ್ತಿ ದೇಗುಲ ಉದ್ಘಾಟನಾ ಸಮಾರಂಭಕರ್ತವ್ಯ ನಿರತ ಸಂಚಾರ  ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್  ದಾಖಲುಪರಿಸರ ಸಂರಕ್ಷಣೆ ರಾಷ್ಟ್ರ ನಿರ್ಮಾಣಕ್ಕೆ ಪೂರಕಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ*ಹೋರಾಟದ ಆಶಾ...!*ಹಿರಿಯೂರು ಉಪಚುನಾವಣೆಗೆ 'ಕೈ' ರಣತಂತ್ರ: ಉಸ್ತುವಾರಿಯಾಗಿ ಮಧು ಪಾಲೇಗೌಡ ನೇಮಕ ಶಿರಾ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ 400 ಲಕ್ಷ ಅನುಮೋದನೆ: ವಿಜನಿ ನಿಗಮದಿಂದ ಮಹತ್ವದ ಆದೇಶಬೇಸಿಗೆ ಕುಡಿಯುವ ನೀರಿನ ಭದ್ರತೆಗೆ ಸಿದ್ಧತೆ: ಜಲಾಶಯಗಳ ನೀರಿನ ಸಂಗ್ರಹ ವಿವರ ನೀಡಲು ನಿಗಮಗಳಿಗೆ ಸೂಚನೆಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಮತ್ತೆ ಮುನ್ನೆಲೆಗೆ: ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಸಚಿವ ಬಾಲಕೃಷ್ಣ ತಿರುಗೇಟುಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗದ್ದಕ್ಕೆ ತಮಿಳುನಾಡು ಸರ್ಕಾರದಿಂದ ಬೇಷರತ್ ಕ್ಷಮೆ