ಚಂದ್ರವಳ್ಳಿ ನ್ಯೂಸ್, :
*ಹೋರಾಟದ ಆಶಾ...!*
ಹಗಲೆನ್ನದೆ, ಇರುಳೆನ್ನದೆ
ಸಮುದಾಯದ ಆರೋಗ್ಯಕ್ಕಾಗಿ,
ಸಮಾಜದ ಸ್ವಾಸ್ಥ್ಯಕ್ಕಾಗಿ
ನಿರಂತರ ಶ್ರಮಿಸುವ ಆಶಾ...!
ಕನಿಷ್ಠ ವೇತನದ ಆಸರೆಯಲ್ಲಿ
ಗರ್ಭಿಣಿಯರ ಆರೈಕೆ,
ಬಾಣಂತಿಯರ ಕಾಳಜಿ,
ಶಿಶುಗಳ ಪೋಷಣೆ,
ಹೀಗೆ ಎಲ್ಲರ ಆರೋಗ್ಯದ ಹೊಣೆ ಹೊತ್ತು
ತನ್ನ ಬದುಕಿನ ಬಂಡಿ ಸಾಗಿಸುತ್ತಿರುವ ಆಶಾ...!
ಸಮಾಜದ ಆರೋಗ್ಯ ಕಾಪಾಡುವ ಕೈಗಳಿಗೆ
ತಮ್ಮ ಬದುಕಿನ ಭದ್ರತೆಯೇ ಇಲ್ಲವೇ?
ಇತರರ ಬದುಕಿಗೆ ಬೆಳಕಾಗುವ ಜೀವಗಳಿಗೆ
ತಮ್ಮ ಬದುಕಿನಲ್ಲಿ ನೆಮ್ಮದಿಯೇ ಇಲ್ಲವೇ?
ಇಂದು ಇತರರ ಆರೋಗ್ಯಕ್ಕಾಗಿ
ಹಗಲಿರುಳು ದುಡಿಯುವ ಅದೇ ಕೈಗಳು,
ತಮ್ಮ ಬದುಕಿನ ಭದ್ರತೆಗಾಗಿ,
ನ್ಯಾಯಯುತ ವೇತನಕ್ಕಾಗಿ
ಬೀದಿಗಿಳಿದು ಹೋರಾಡುತ್ತಿವೆ...!
ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ,
ಅವರ ಸೇವೆಗೆ ಸೂಕ್ತ ಗೌರವ ದೊರೆಯಲಿ,
ಅವರ ಬದುಕಿಗೂ ಭದ್ರತೆಯ ಬೆಳಕು ಮೂಡಲಿ...
ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟಕ್ಕೆ
**ನನ್ನ ಸಂಪೂರ್ಣ ಬೆಂಬಲ...!**
ಕವಿತೆ: ವೇಣುಕುಮಾರ್. ಎಂ. ಭರಂಪುರ.




