Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೋಟೆಲ್ ಉದ್ಯಮಿಗಳಿಗೆ ಭರ್ಜರಿ ಸಿಹಿ ಸುದ್ದಿ: ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ!

Advertisement
Advertisement

 ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹೋಟೆಲ್‌ಗಳು
, ರೆಸ್ಟೋರೆಂಟ್‌ಗಳು, ಡಾಬಾಗಳು ಹಾಗೂ ಆಹಾರ ಉದ್ಯಮದಲ್ಲಿ ತೊಡಗಿರುವ ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಜುಲೈ ಆರಂಭದಲ್ಲೇ ಭರ್ಜರಿ ಉಡುಗೊರೆ ನೀಡಿವೆ. 19 ಕೆ.ಜಿ. ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 183.50 ಇಳಿಕೆ ಮಾಡಲಾಗಿದ್ದು, ಹೊಸ ದರಗಳು ಜುಲೈ 1 ರಿಂದಲೇ ಜಾರಿಗೆ ಬಂದಿವೆ.

ಈ ಇಳಿಕೆಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3,113.50 ರಿಂದ 2,930 ಕ್ಕೆ ಇಳಿದಿದೆ.

ದೇಶದ ಪ್ರಮುಖ ನಗರಗಳಲ್ಲೂ ವಾಣಿಜ್ಯ ಸಿಲಿಂಡರ್ ದರ ಗಣನೀಯವಾಗಿ ಇಳಿಮುಖಗೊಂಡಿದೆ.
ಬೆಂಗಳೂರು:
3,021.00, ಲಖನೌ: 3,052.50 (ಹಿಂದೆ 3,236 ಇತ್ತು), ಕೋಲ್ಕತ್ತಾ: 3,081.50 (ಹಿಂದೆ 3,255.50 ಇತ್ತು), ಪಾಟ್ನಾ: 3,227.00.

ಗೃಹ ಬಳಕೆಯ ಗ್ರಾಹಕರಿಗೆ ಸಿಗದ ಸಿಹಿ: 942ರಲ್ಲೇ ಯಥಾಸ್ಥಿತಿ
ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದರೂ
, ಮನೆ ಮಂದಿಗೆ ಮಾತ್ರ ಈ ಬಾರಿ ಯಾವುದೇ ನೆಮ್ಮದಿ ಸಿಕ್ಕಿಲ್ಲ. 14.2 ಕೆ.ಜಿ. ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಸದ್ಯಕ್ಕೆ 942 ರಲ್ಲೇ ಮುಂದುವರಿದಿದ್ದು, ಸಾಮಾನ್ಯ ಗ್ರಾಹಕರು ಮುಂದಿನ ಪರಿಷ್ಕರಣೆಯವರೆಗೂ ಕಾಯಲೇಬೇಕಾಗಿದೆ.

ದರ ಏರಿಳಿತದ ಹಿಂದಿನ ಜಾಗತಿಕ ಕಾರಣಗಳೇನು?
ಕಳೆದ ಫೆಬ್ರವರಿ
28 ರಂದು ಆರಂಭವಾದ ಅಮೆರಿಕ ಮತ್ತು ಇಸ್ರೇಲ್-ಇರಾನ್ ನಡುವಿನ ಜಾಗತಿಕ ಸಂಘರ್ಷ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡಿತ್ತು. ಇರಾನ್ ತನ್ನ ನಿಯಂತ್ರಣದಲ್ಲಿರುವ 'ಹಾರ್ಮುಜ್ ಜಲಸಂಧಿ' ಮೂಲಕ ಸಾಗುತ್ತಿದ್ದ ಕಚ್ಚಾ ತೈಲ ಹಡಗುಗಳನ್ನು ತಡೆದಿದ್ದರಿಂದ ಜಗತ್ತಿನಾದ್ಯಂತ ಇಂಧನ ಕೊರತೆ ಉಂಟಾಗಿ ದರಗಳು ಗಗನಕ್ಕೇರಿದ್ದವು.

ಇದರ ಪರಿಣಾಮವಾಗಿ ಭಾರತದಲ್ಲಿ ಕಳೆದ 4 ತಿಂಗಳುಗಳಲ್ಲಿ (ಮಾರ್ಚ್‌ನಿಂದ ಜೂನ್‌ವರೆಗೆ) ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಸತತವಾಗಿ ಒಟ್ಟು 1,374.50 ರಷ್ಟು ಹೆಚ್ಚಿಸಿದ್ದವು! ಗೃಹ ಬಳಕೆಯ ಸಿಲಿಂಡರ್ ಬೆಲೆಯೂ ಸಹ 89 ರಷ್ಟು ಏರಿಕೆಯಾಗಿತ್ತು. ಈಗ ವಾಣಿಜ್ಯ ಸಿಲಿಂಡರ್ ಮೇಲೆ 183.50 ಇಳಿಕೆ ಮಾಡಲಾಗಿದ್ದರೂ, ಹಿಂದಿನ ಭಾರಿ ಏರಿಕೆಗೆ ಹೋಲಿಸಿದರೆ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲೇ ಇದೆ ಎಂಬುದು ಗ್ರಾಹಕರ ಅಳಲಾಗಿದೆ.

ಪೆಟ್ರೋಲ್ ರಫ್ತು ಸುಂಕದಲ್ಲೂ ಮಹತ್ವದ ಬದಲಾವಣೆ
ಇದೇ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್ ರಫ್ತು ನಿಯಮಗಳನ್ನು ಬಿಗಿಗೊಳಿಸಿದೆ. ಜುಲೈ
1ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 1.50 ರಿಂದ 4 ಕ್ಕೆ ಏರಿಕೆ ಮಾಡಲಾಗಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.