E-PAPER
18 Nov 2026, 12:29:55 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಕುಟುಂಬ ಸಮೇತ ಕರಾವಳಿಯ ಶಕ್ತಿ ಪೀಠಗಳಿಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ

​ ಚಂದ್ರವಳ್ಳಿ ನ್ಯೂಸ್, ಉಡುಪಿ:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ
, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

​ಮೊದಲಿಗೆ ಜಿಲ್ಲೆಯ ಕಾಪುವಿನಲ್ಲಿರುವ ಐತಿಹಾಸಿಕ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ದಂಪತಿ, ಮಾರಿಯಮ್ಮ ದೇವಿಯ ದರ್ಶನ ಪಡೆದು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, "ಜಗನ್ಮಾತೆಯ ದರ್ಶನ ಭಾಗ್ಯದಿಂದ ನಾನು ಧನ್ಯನಾದೆ. ನಾಡಿಗೆ ಒಳ್ಳೆಯದನ್ನೇ ಕರುಣಿಸಮ್ಮ ಎಂದು ತಾಯಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೇನೆ" ಎಂದು ತಿಳಿಸಿದರು.

​ನಂತರ ಶ್ರೀ ಕ್ಷೇತ್ರ ಕೊಲ್ಲೂರಿಗೆ ತೆರಳಿದ ಅವರು, ಜಗನ್ಮಾತೆ ಶ್ರೀ ಮೂಕಾಂಬಿಕಾ ಅಮ್ಮನವರ ದಿವ್ಯ ದರ್ಶನ ಪಡೆದರು. ಕುಟುಂಬ ಸದಸ್ಯರೊಂದಿಗೆ ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, "ಜಗನ್ಮಾತೆ ಶ್ರೀ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ ನನ್ನದಾಯಿತು.

news_1794836281_3_480.webp

 

ನಾಡಿನ ಜನತೆಗೆ ಒಳಿತಾಗಲಿ, ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸುವಂತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಲಾಯಿತು" ಎಂದು ಸಂತಸ ಹಂಚಿಕೊಂಡರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದವಲ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಹೂ ಕೋಸು ನಾರು ಪೂರೈಕೆ:ಬೆಳೆ ನಾಶವಾಗಿ ಕಂಗಾಲಾದ ರೈತಬಸವಣ್ಣನವರ ಮೇಲೆ ಕಳಂಕದ ಮಾತು ಸಲ್ಲದು; ಅವರ ವಚನಗಳೇ ಆರೋಪಗಳಿಗೆ ಕನ್ನಡಿ!ಬಿಲ್ಕಿಸ್ ಬಾನೋ ಪ್ರಕರಣ: 17 ವರ್ಷ ಜೈಲುವಾಸ ಪೂರೈಸಿದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು'ಪ್ರೆಸ್' ಸ್ಟಿಕ್ಕರ್ ಬಳಸಿ ಶವ ಸಾಗಾಟ: ರಾಜಾಜಿನಗರ ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿ ಕರಾಳ ಮುಖ ಬಯಲು!ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಬೇಡ: ಯುರೋಪ್ ರಾಜಕಾರಣಿ ಹೇಳಿಕೆಗೆ ಇಟಲಿ ಸಂಸದೆ ಡೆಬೊರಾ ಬೆರ್ಗಾಮಿನಿ ತಿರುಗೇಟುಯುಪಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 181 ಸೀಟುಗಳ ಪಟ್ಟಿ ಸಲ್ಲಿಕೆ, ಎಸ್‌ಪಿ ಜೊತೆ ಮಹತ್ವದ ಸಭೆವಿಧಾನ ಪರಿಷತ್‌ನ ನಾಲ್ವರು ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರನಿಗಮ-ಮಂಡಳಿ ನೇಮಕಾತಿ: ಕಾಂಗ್ರೆಸ್‌ನಲ್ಲಿ ಭಿನ್ನಮತ, ಆರ್‌ಎಸ್‌ಎಸ್ ಕಾರ್ಯಕರ್ತರ ಸೇರ್ಪಡೆಗೆ ತೀವ್ರ ಆಕ್ಷೇಪಹಿರಿಯೂರು ಉಪಚುನಾವಣೆ-ಎನ್‌ಡಿಎ ಮೈತ್ರಿಯಲ್ಲಿ ಟಿಕೆಟ್ ಕಗ್ಗಂಟು!ಹಿರಿಯೂರು ಉಪಚುನಾವಣೆ: ಬಿಜೆಪಿಯ ದೆಹಲಿ ಅಂಗಳಕ್ಕೆ ಮೂವರ ಹೆಸರು ರವಾನೆ?