E-PAPER
15 Nov 2026, 05:51:02 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಂಪ್ರದಾಯದ ಹೆಸರಿನಲ್ಲಿ ದೇಗುಲದ ಆನೆಗಳಿಗೆ ಬಂಧನದ ಶಿಕ್ಷೆ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧಾರ್ಮಿಕ ಆಚರಣೆಗಳಲ್ಲಿ ಪೂಜ್ಯ ಸ್ಥಾನ ಪಡೆದಿರುವ ದೇಗುಲ ಮತ್ತು ಮಠಗಳ ಆನೆಗಳು
, ಮತ್ತೊಂದೆಡೆ ಬಂಧನದ ಬದುಕಿನಿಂದಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ರಾಜ್ಯದಲ್ಲಿ ಮತ್ತೊಮ್ಮೆ ಗಂಭೀರ ಚರ್ಚೆ ಶುರುವಾಗಿದೆ.

ಕರ್ನಾಟಕದ ಅಲಕನೂರು ಮಠದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ 'ಧ್ರುವರಾಜ' ಎಂಬ ಆನೆ, ಕೇವಲ 30ನೇ ವಯಸ್ಸಿನಲ್ಲೇ ಮೃತಪಟ್ಟಿರುವುದು ಈ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಆನೆಗಳ ನೈಸರ್ಗಿಕ ಆಯುಷ್ಯ ಸುಮಾರು 70 ವರ್ಷಗಳಾಗಿರುತ್ತವೆ. ಆದರೆ ಧ್ರುವರಾಜನ ಅಕಾಲಿಕ ಸಾವು, ದೇಗುಲದ ಆನೆಗಳ ಜೀವನಮಟ್ಟ ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸುಜಯ್ ಜಗದೀಶ್ ಎಂಬುವವರು 'ಎಕ್ಸ್' (ಟ್ವಿಟರ್) ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ತೀವ್ರ ಕಿಡಿ: ಇದೇ ವೇಳೆ, ದೇಗುಲದ ಆನೆಯೊಂದರ ಕಾಲಿಗೆ ಸರಪಳಿ ಬಿಗಿದು ತೀವ್ರ ಗಾಯವಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ), ಸಂಬಂಧಪಟ್ಟ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಇಂತಹ ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಕಂಡು ತೀವ್ರ ದುಃಖ ಮತ್ತು ಕೋಪ ಬರುತ್ತಿದೆ. ಇಲಾಖೆಯೇ ಇವುಗಳಿಗೆ ಅವಕಾಶ ನೀಡುತ್ತಿರುವುದು ಶೋಚನೀಯ. ಸಚಿವರು ಹಾಗೂ ಧಾರ್ಮಿಕ ವಲಯದ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ" ಎಂದು ರಮ್ಯಾ ಕಿಡಿಕಾರಿದ್ದಾರೆ.

ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವುದರ ಜೊತೆಗೆ, ಮೂಕ ಪ್ರಾಣಿಗಳನ್ನು ಅವುಗಳ ಸಹಜ ಪರಿಸರದಿಂದ ದೂರವಿಟ್ಟು ಹಿಂಸಿಸದೆ, ಅವುಗಳ ಸ್ವಾತಂತ್ರ್ಯ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಂತ್ರಿಕ ದೋಷ: ಕೆಟ್ಟು ನಿಂತಿದ್ದ ಪ್ರಧಾನಿ ಬೆಂಗಾವಲು ಹೆಲಿಕಾಪ್ಟರ್ ವಾಪಸ್  ಸಂಪ್ರದಾಯದ ಹೆಸರಿನಲ್ಲಿ ದೇಗುಲದ ಆನೆಗಳಿಗೆ ಬಂಧನದ ಶಿಕ್ಷೆ?ಮೇಕೆದಾಟು ಯೋಜನೆ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಆಕ್ಷೇಪನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ಆರೋಪ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿಮನೆ ಮುಂದೆ ಪೋಸ್ಟರ್ ಅಂಟಿಸುವುದು ಕೀಳುಮಟ್ಟದ ರಾಜಕಾರಣ: ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ15,000 ರೂ. ವೇತನ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ರೂ. ಜಿಎಸ್‌ಟಿ ವಂಚನೆ!ಒಂದೆರಡು ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿಯ ಎರಡನೇ ಪಟ್ಟಿ ಬಿಡುಗಡೆ: ಸಿಎಂ ಡಿ.ಕೆ ಶಿವಕುಮಾರ್ಮಾಲೆ ಧರಿಸಿದ ಅಯ್ಯಪ್ಪಸ್ವಾಮಿಗಳಿಗೆ ಪ್ರತಿದಿನ ಅನ್ನಪ್ರಸಾದ ಹಾಗೂ ಧಾರ್ಮಿಕ ಕಾರ್ಯಕ್ರಮಗಳುರಾಜ್ಯಪಾಲರ ನವೆಂಬರ್ 15 ಮತ್ತು 16 ರಂದು ಬೆಂ ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರವಾಸ​ಜನತಂತ್ರದ ಮುಖವಾಡ – ಜನಾಧಿಕಾರದ ಅಪಹರಣ