ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಬಡವರ್ಗದವರ ಹಾಗೂ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ೨೦೨೬-೨೦೨೭ನೇ ಸಾಲಿನ ಎಸ್.ಎಫ್.ಸಿ. ಮತ್ತು ಪಟ್ಟಣ ಪಂಚಾಯಿತಿ ನಿಧಿ ಅನುದಾನದಲ್ಲಿ ತೆಗೆದುಕೊಂಡ ಬಂಡವಾಳ ಸ್ರುಜನೆ ನಿಧಿಯಡಿ ಶೇ.೨೪.೧೦%, ಶೇ.೭.೨೫% ಮತ್ತು ಶೇ.೫%ರಡಿ ಮಾನ್ಯ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಂದ ಕ್ರಿಯಾ ಯೋಜನೆ ಅನುಮೋದನೆಯಂತೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್.೩೦ರಂದು ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಶೇ.೨೪.೧೦, ಶೇ.೭.೨೫, ಶೇ.೫ ಯೋಜನೆಯಡಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ವಿದ್ಯಾಭ್ಯಾಸದ ಪೋತ್ಸಾಹ ಧನ, ಹಿಂದುಳಿದ ಬಡವರ್ಗದವರ ಮಕ್ಕಳಿಗೆ
ವಿದ್ಯಾಭ್ಯಾಸದ ಪೋತ್ಸಾಹ ಧನ ಹಾಗೂ ವಿಶೇಷಚೇತನರಿಗೆ ಶಸ್ತ್ರಚಿಕಿತ್ಸೆಗೆ ಸಹಾಯಧನ, ವೀಲ್ ಚೇರ್ಗಳು, ಶ್ರವಣ ಸಾಧನಗಳ ವಿತರಣೆ, ದೃಷ್ಟಿ ದೋಷವಿರುವವರಿಗೆ ಬ್ರೈಲ್ ವಾಚ್ಗಾಗಿ, ಪೌರಾಕಾರ್ಮಿಕರಿಗೆ ಹಾಗೂ ಅವಲಂಬಿತ ಕುಟುಂಬಗಳಿಗೆ ವೈದ್ಯಕೀಯ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ಹಾಗೂ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಕಛೇರಿ ಅವಧಿಯಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ನಲ್ಮ್ ಶಾಖೆಯನ್ನು ಸoಪರ್ಕಿಸಲು ಕೋರಲಾಗಿದೆ.




