E-PAPER
29 Nov 2026, 08:41:19 AM|
Gold₹12654/gGold24K ₹12,654/g - 22K ₹11,589/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Rural

ಸಾಮಾಜಿಕ ಸಮಾನತೆಗೆ ಕನಕ ಚಿಂತನೆಗಳು ಫೂರಕ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಸಮಸಮಾಜ ನಿರ್ಮಾಣದ ಪ್ರತಿಪಾದಕರಾಗಿ ಎಲ್ಲ ವರ್ಗಗಳ ಹಿತವನ್ನು ಬಯಸಿದ ಅಪ್ರತಿಮ ದಾರ್ಶನಿಕ ಕನಕದಾಸರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುವ ಅಗತ್ಯವಿದೆ. 5 ಶತಮಾನಗಳಷ್ಟು ಹಿಂದೆಯೇ ಸಾಮಾಜಿಕವಾಗಿ ಅನೇಕ ಪಿಡುಗುಗಳ ವಿರುದ್ದ ದನಿಯೆತ್ತಿದ ಕನಕದಾಸರ ಕೀರ್ತನೆಗಳ ಸಾರವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆ ಮೂಲಕ ಬದಲಾವಣೆ ಸಾಧ್ಯ ಎಂದರು.

ಕನಕದಾಸರು ಈ ನಾಡಿನ ಮೊದಲ ಸಾತ್ವಿಕ ಬಂಡಾಯದ ದನಿಯಾಗಿದ್ದಾರೆ. ವರ್ಗ, ಜಾತಿ ಅಸಮಾನತೆಯ ವಿರುದ್ದ ಪ್ರತಿಪಾದಿಸಿದ ಅವರು ಸಮರ್ಪಣಾ ಮನೋಭಾವದ ಭಕ್ತಿಯ ಮೂಲಕ ಮಹತ್ತನ್ನ ಸಾಧಿಸಿದ ವ್ಯಕ್ತಿತ್ವ. ಮೇಲು-ಕೀಳುಗಳ ಪರಿಕಲ್ಪನೆಯನ್ನು ಧಿಕ್ಕರಿಸಿ ಶೋಷಿತ ಮತ್ತು ಧಮನಿತ ವರ್ಗದ ಪರ ನಿಂತ ದಾರ್ಶನಿಕರಾಗಿದ್ದಾರೆ. ನವಿರು ಭಾವದ ಮನೋವಿಲಾಸದ ಕವಿಯಾಗಿ, ನಾಡರಕ್ಷಣೆಯ ಹೊಣೆಯೊತ್ತ ಕಲಿಯಾಗಿ, ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಸಮಾಜ ಸುಧಾರಕನಾಗಿ ಕನಕದಾಸರು ಮುಖ್ಯವಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಎಇಇ ಐ.ಎಂ.ರಮೇಶ್‌ಕುಮಾರ್, ಪಾಲಿಟೆಕ್ನಿಕ್ ಕಾಲೇಜು ಉಪಪ್ರಾಂಶುಪಾಲ ಗುರುದೇವ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಡಿ.ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಮತ್ತಿತರರು ಉಪಸ್ಥಿತರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿ ಕುರಿತು ಪ್ರಧಾನಿ ಮೋದಿ ಸ್ಪಷ್ಟನೆ ನೀಡಲಿ: ಸಿದ್ದರಾಮಯ್ಯ2028ರಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಿಲ್ಲ, 2029ಕ್ಕೆ ನಡೆಯಲಿದೆ: ಶಾಸಕ ಎಸ್.ಟಿ. ಸೋಮಶೇಖರ್ಶಾಸಕರ ಭೋಜನ ಕೂಟಕ್ಕೆ ರಾಜಕೀಯ ಬಣ್ಣ ಬೇಡ: ಸಚಿವ ಸತೀಶ್ ಜಾರಕಿಹೊಳಿಮಧ್ಯರಾತ್ರಿ ಜಮೀನು ನೋಡಲು ಹೋಗಿದ್ದ ಸಿಎಂರನ್ನು ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಓಡಿಸಿದ್ದರು: ಹೆಚ್.ಡಿ. ಕುಮಾರಸ್ವಾಮಿಕೋಮಾದಲ್ಲಿರುವ ಬಾಲಕಿ ಶಯಾನ ಆರೋಗ್ಯ ಮತ್ತಷ್ಟು ಗಂಭೀರ: ಕ್ಲೌಡ್ ನೈನ್ ಆಸ್ಪತ್ರೆಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆಪಾವಗಡ ಬಳಿ ಭೀಕರ ರಸ್ತೆ ಅಪಘಾತ: ಮೂವರು ಕಟ್ಟಡ ಕಾರ್ಮಿಕರ ದುರ್ಮರಣಅಭಿವೃದ್ಧಿಗೆ ಜಪಾನ್ ಟಚ್: ಹೂಡಿಕೆ, ಮೆಟ್ರೋ ವಿಸ್ತರಣೆ ಮತ್ತು ಹೈಟೆಕ್ ತ್ಯಾಜ್ಯ ನಿರ್ವಹಣೆಗೆ ಸರ್ಕಾರದ ಮುನ್ನೋಟಬಂದೂಕು, ದೊಣ್ಣೆ ಹಿಡಿದು ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲೀಕನ ಅಮಾನವೀಯ ಹಲ್ಲೆಆಶಾ ಕಾರ್ಯಕರ್ತೆಯರ ಪ್ರತಿಭಟನೆ ಅಂತ್ಯ: ಗೌರವಧನ 2,000 ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆಡಿ. 07 ರಂದು ವೀರಕೆಂಚಮ್ಮ ದೇವಿಯ ದೇವಾಲಯದಲ್ಲಿ ಕಾರ್ತೀಕ ಮಾಸದ ದೀಪೋತ್ಸವ