ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯ ತುರುವನಹಳ್ಳಿ ಗ್ರಾಮದ ರಸ್ತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ರವರ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ದೊಡ್ಡತಿಮ್ಮನಹಳ್ಳಿಯ ಸಪ್ಪಲಮ್ಮ ದೇವಸ್ದಾನ ದಿಂದ ತುರುವನಹಳ್ಳಿ ಗ್ರಾಮದ ವರೆವಿಗೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅನುದಾನದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಸುಮಾರು 1ಕಿಲೋ ಮೀಟರ್ ರಸ್ತೆ ಡಾಂಬರೀಕರಣಕ್ಕೆ ಸಚಿವರ ಅನುಮತಿಯಂತೆ ಚಾಲನೆ ನೀಡಲಾಯಿತು ಎಂದು ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರವಿ ಸಿದ್ದಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜು, ಶ್ರೀ ಘಾಟಿ ದೇವಾಲಯದ ಆಭಿವೃದ್ದಿ ಪ್ರಾಧಿಕಾರದ ಸದಸ್ಯ ರಂಗಪ್ಪ, ಮೆಳೆಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿದಾನಂದ, ತೂಬಗೆರೆ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ,
ತಾ. ಕೃಷಿಕ ಸಮಾಜದ ಅಧ್ಯಕ್ಷ ಮುರಳಿ, ಮುನಿರಾಜು, ದೊಡ್ಡತಿಮ್ಮನ ಹಳ್ಳಿಯ ಮುನೇಶ್ವರ ದೇವಾಲಯದ ಅರ್ಚಕ ಅಶ್ವತ್ಥಪ್ಪ, ನರಸಿಂಹ ಮೂರ್ತಿ, ತಿರುಮಗೊಂಡನಹಳ್ಳಿ ನಂಜೇಗೌಡ, ಹಾಡೋನಹಳ್ಳಿ ಪಿಳ್ಳಪ್ಪ, ಶೆಟ್ಟಪ್ಪ, ಹಾಗು ತೂಬಗೆರೆ ಹೋಬಳಿಯ ಕಾಂಗ್ರೇಸ್ ಪದಾದಿಕಾರಿಗಳು ಹಾಗು ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.




