Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ವಾಹನ ಸವಾರರೇ ಎಚ್ಚರ, ರಸ್ತೆಗಳಲ್ಲಿ AI ಕ್ಯಾಮೆರಾಗಳ ಅಳವಡಿಕೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆ, ವೃತ್ತ ಮತ್ತಿತರ ಸಿಗ್ನಲ್ ಗಳಲ್ಲಿ ಟ್ರಾಫಿಕ್​ ಪೊಲೀಸರು ಇರಲ್ಲ ಎಂದುಕೊಂಡು ಸಂಚಾರ ನಿಯಮ ಗಾಳಿಗೆ ತೂರಿ ಆರಾಮಾಗಿ ವಾಹನ ಸಂಚರಿಸಿಕೊಂಡಿದ್ದವರಿಗೆ ಪೊಲೀಸ್​ ಇಲಾಖೆ ಬಹುದೊಡ್ಡ ಶಾಕ್​ ನೀಡಿದೆ. ಬೆಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ AI ಕ್ಯಾಮೆರಾಗಳನ್ನ ಪೊಲೀಸ್ ಇಲಾಖೆ ಅಳವಡಿಸಿದ್ದು ಸಂಚಾರ ನಿಯಮ ಉಲ್ಲಂಘನೆ ಮಾಡುವಂತ ಚಾಲಕರು ಮತ್ತು ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿವೆ.


2025ರ ಜನವರಿಯಿಂದ ಜುಲೈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 87ರಷ್ಟು ಎಐ ಕ್ಯಾಮರಾಗಳಿಂದಲೇ ಆಗಿವೆ.


ಈ ರೀತಿಯ ಕ್ಯಾಮೆರಾಗಳ ಬಳಕೆಯಿಂದಾಗಿ ಪೊಲೀಸರು ವಾಹನಗಳನ್ನ ತಡೆದು ದಂಡ ವಿಧಿಸಬೇಕಾದ ಅನಿವಾರ್ಯತೆ ಇರಲ್ಲ. ವಿಡಿಯೋ, ಫೋಟೋ ದಾಖಲಾಗುವ ಕಾರಣ ವಾಹನಗಳ ಮಾಲಕರು ನಾವು ಸಂಚಾರ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವಂತೆಯೂ ಇಲ್ಲ.


ಹೆಲ್ಮೆಟ್​ ಇಲ್ಲದೆ ವಾಹನ ಚಾಲನೆ, ಹಿಂಬದಿ ಸವಾರರು ಹೆಲ್ಮೆಟ್​ ಧರಸಿದೇ ಇರುವುದು, ಸೀಟ್​ ಬೆಲ್ಟ್​ ಧರಿಸದೆ ಇರುವುದು ಮತ್ತು ಸಿಗ್ನಲ್​ ಜಂಪ್​ನಂತಹ ಪ್ರಕರಣಗಳನ್ನ ಈ AI ಕ್ಯಾಮೆರಾಗಳು ಪತ್ತೆ ಮಾಡಲಿವೆ.
2025ರ ಜವರಿಯಿಂದ ಜುಲೈವರೆಗೆ ಒಟ್ಟು 30 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಪ್ರತಿದಿನ 11,800 ಕೇಸ್​ ಗಳು ಈ AI ಕ್ಯಾಮೆರಾಗಳಿಂದಲೇ ವರದಿಯಾಗಿವೆ.


ಕೇವಲ 1,500 ಪ್ರಕರಣಗಳಷ್ಟೇ ಪೊಲೀಸರಿಂದ ದಾಖಲಾಗಿವೆ. ಇವುಗಳಲ್ಲಿ ನೋ ಎಂಟ್ರಿಯಲ್ಲಿ ವಾಹನ ಚಾಲನೆ, ನಿಷೇಧಿತ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್​ನಂತಹ ಕೇಸ್​ಗಳೇ ಹೆಚ್ಚಿವೆ.


AI ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜನರಿಗೂ ಈ ಬಗ್ಗೆ ಜಾಗೃತಿ ಮೂಡಿದೆ.
ನಗರದಾದ್ಯಂತ
75ಕ್ಕೂ ಹೆಚ್ಚಿನ ಎಐ ರೀತಿಯ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಟನೆ ಕೇಸ್​ಗಳ ಮಾಹಿತಿ ತಿಳಿಯಲು ಸಾರ್ವಜನಿಕರ ಅನುಕೂಲಕ್ಕೆ ASTraM ಆ್ಯಪ್​ ಕೂಡ ಇದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಕಾರ್ತಿಕ್​ ರೆಡ್ಡಿ ತಿಳಿಸಿದ್ದಾರೆ.


AI ಕ್ಯಾಮೆರಾಗಳ ಅಳವಡಿಕೆ ಬಳಿಕವೂ ಪಾರ್ಕಿಂಗ್​ ನಿಯಮ ಮತ್ತು ಏಕ ಮುಖ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ತಡೆ ಮಾಡುವುದು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!