Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ದುರ್ಗದ ಹಟ್ಟಿಗಳಲ್ಲಿ ಪರಿವರ್ತನಾ ಪರ್ವ!

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
'
ನಮಗೂ ಕೆಲಸಗಳಿವೆ ಬಂದು ಹೋಗಿ; ನಿಮಗೂ ಕೆಲಸಗಳಿವೆ ಹೋಗಿ ಬನ್ನಿ'. ಇದು ನಟ ಉಪೇಂದ್ರ ಅಭಿನಯದ ಯಾವುದೇ ಚಲನಚಿತ್ರದ ಡೈಲಾಗ್ ಎಂದು ಪರಿಭಾವಿಸದಿರಿ. ಈ ಬರಹವಿರುವ ಬ್ಯಾನರ್ ಚಿತ್ರವೀಗ ಚಿತ್ರದುರ್ಗದಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಶೋಷಿತ ಸಮುದಾಯಗಳ ಯುವಕರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಟ್ಟಿಗಳಲ್ಲಿ ಪರಿವರ್ತನಾ ಗಾಳಿ ಬೀಸಲು ಪ್ರೇರಣೆ ನೀಡುತ್ತಿದೆ ಎಂದರೆ ಸೋಜಿಗವಲ್ಲ.

ಬಯಲುಸೀಮೆಯ ಚಿತ್ರದುರ್ಗದಲ್ಲಿ ವಾರಗಟ್ಟಲೇ ಮಾರಮ್ಮನ ಹಬ್ಬ ಆಚರಿಸುವ ಪರಿಪಾಠವಿದೆ. ವರ್ಷವಿಡೀ ಮೈಮುರಿದು ದುಡಿಯುವ ಜನ ಹಬ್ಬದಲ್ಲಿ ಮಿಂದೇಳುತ್ತಾರೆ. ಬೆವರಿನ ಹಣ ಹಬ್ಬದ ಹೆಸರಿನಲ್ಲಿ ಸದ್ದಿಲ್ಲದೆ ಸವೆದಿರುತ್ತದೆ. ಹಬ್ಬ ಮುಗಿದ ಬಳಿಕ ಮತ್ತದೆ ದುಡಿಮೆಯ ಹಾದಿಯ ಅನಿವಾರ್ಯತೆ. ಅನೇಕರ ಪಾಲಿಗೆ ಉಳಿಕೆ ಮತ್ತು ಗಳಿಕೆ ಎಂಬುದು ಗಗನ ಕುಸುಮ. ಇನ್ನೂ ಕೆಲವರಿಗೆ ಹಬ್ಬ ಎಂಬುದು ಸಾಲದ ಶೂಲವೇ ಸರಿ. ಆದರೂ ಹಬ್ಬಗಳು ಮಾತ್ರ ನಿಲ್ಲಲ್ಲ; ಹಬ್ಬದ ಆಚರಣೆ ನಿರಂತರ!
ದುರ್ಗಕ್ಕೆ ಭದ್ರೆಯ ಹೊಸ ನೀರು ಹರಿದು ಬರುವ ಈ ಸುಸಂದರ್ಭದಲ್ಲಿ ಹಟ್ಟಿಗಳಲ್ಲಿ ಹೊಸ ಗಾಳಿ ಬೀಸಲು ಶುರುವಾಗಿದೆ. ಬಿರು ಬೇಸಿಗೆಯಲ್ಲೂ ತಣ್ಣನೆಯ ದಿವ್ಯಾನುಭೂತಿ ಆವರಿಸಿದೆ. ಹುಣಸೇಕಟ್ಟೆ ಎಂಬ ಗ್ರಾಮದಲ್ಲಿ ಯುವಕರು ಅಳವಡಿಸಿದ ಬ್ಯಾನರ್ ಪರಿವರ್ತನಾ ಪರ್ವದ ಸಂಕೇತವಾಗಿದೆ.

'ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ಮತ್ತು ನೆಂಟರು, ಅತಿಥಿಗಳು ಎರಡು ದಿನ ಆತಿಥ್ಯ ಸ್ವೀಕರಿಸಿ ತಮ್ಮ ಗ್ರಾಮಕ್ಕೆ ಮರಳುತ್ತಿರುವ ತಮಗೆ ವಂದನೆಗಳು. ನಮಗೂ ಕೆಲಸಗಳಿವೆ ಬಂದು ಹೋಗಿ; ನಿಮಗೂ ಕೆಲಸಗಳಿವೆ ಹೋಗಿ ಬನ್ನಿ' ಎಂಬುದಾಗಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯಿಂದ ಯುವಕರು ಬ್ಯಾನರ್ ಹಾಕಿಸಿದ್ದಾರೆ. ಇದೇ ಬ್ಯಾನರ್ ಈಗ ಸಂಚಲನ ಸೃಷ್ಟಿಸಿದ್ದು ಸರಳ ಹಬ್ಬದಾಚರಣೆ, ಬಾಂಧವ್ಯದ ನಿರ್ವಹಣೆ ಜತೆಗೆ ಕಾಯಕ ಪ್ರಜ್ಞೆ ಬಡಿದೆಚ್ಚರಿಸಿ ಆರ್ಥಿಕ ಜಾಗೃತಿ ಮೂಡಿಸಿದೆ.

ಬ್ಯಾನರ್ ನೋಡಿದಾಕ್ಷಣ ನನಗಂತೂ ಮೊದಲಿಗೆ ಚಾಣಾಕ್ಷ ವ್ಯಾಪಾರಿಗಳು ನೆನಪಾದರು. ಅಂಗಡಿಯ ಕ್ಯಾಶ್ ಕೌಂಟರ್ ನಲ್ಲೇ 'ನಗದು ಪ್ರೇಮಸಂಗ ಉದ್ರಿ ಮಾನಭಂಗ' ಎಂಬುದಾಗಿ ಪ್ರಕಟಿಸಿ ಮುಲಾಜಿಲ್ಲದೆ ಹಣ ವಸೂಲಿ ಮಾಡುವ ಪರಿ ನೆನಪಾಗಿ ನಗು ಬಂತು. ಆದರೂ ವ್ಯಾಪಾರೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಈ ಶಿಸ್ತು ಅಗತ್ಯವೆಂಬ ಪರಮ ಸತ್ಯ ಅರಿವಾಯಿತು.

ನನ್ನ ತಾತ ಸಂತ ಗುಣದ ಲಿಂಗಪ್ಪ ಮುದನೂರ್ ಅವರು ಹೇಳುತ್ತಿದ್ದ ವೈಚಾರಿಕ ಮಾತುಗಳು ಕಾಡಿದವು. ನಮ್ಮದೇ ಕುಟುಂಬದ ಅನೇಕರು ದೇವರು-ದಿಂಡಿರು ಎಂದು ವಿವಿಧ ಆಚರಣೆಗಳನ್ನು ಆಚರಿಸಿ ದಿವಾಳಿ ಆಗುತ್ತಿದ್ದ ಕಾಲದಲ್ಲೇ ತಾತ ಮಾತ್ರ ಮೌಢ್ಯ ಆಚರಣೆಗಳಿಗೆ ಸಲಾಂ ಹೊಡೆದಿದ್ದರು. ಅಪಾರ ದೈವ ಭಕ್ತರಾಗಿದ್ದ ತಾತ ಗುರುಬೋಧನೆ ತೆಗೆದುಕೊಂಡಿದ್ದರು. ಆಧ್ಯಾತ್ಮದಲ್ಲಿ ಸಾಧಕರಾಗಿ ಗುರುತಿಸಿಕೊಂಡಿದ್ದರು. ಆದರೆ, 'ದೇವರ ಹೆಸರಿನಲ್ಲಿ ಉಪರಾಟಿ ಖರ್ಚು ಮಾಡಬ್ಯಾಡ್ರಿ. ಭಕ್ತಿಯಿಂದ ದೀಪ ಮುಡಿಸಿ ಕೈಮುಗಿಯಿರಿ' ಸಾಕೆನ್ನುತ್ತಿದ್ದರು.

 

'ಕಡುಕಷ್ಟ ಬಂದರೂ ದೇವರಿಗೆ ಕುರಿ-ಕೋಳಿಯ ಹರಕೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ದೇವರು ಏನೂ ಕೇಳಲ್ಲ; ನಿಮ್ಮ ಸಮಾಧಾನಕ್ಕೆ ಬೇಕಿದ್ದರೆ ದೀಪ ಮುಡಿಸುವ ಹರಕೆ ಹೊತ್ತುಕೊಳ್ಳಿ. ಅಷ್ಟರ ಮೇಲೆ ಏನೂ ಹರಕೆ ಬೇಡ' ಎಂದು ಹೇಳಿ ಆತ್ಮ ಜಾಗೃತಿ ಮೂಡಿಸುತ್ತಿದ್ದರು. ತಾತನ ಮಾತುಗಳು ಅದೆಷ್ಟು ಸತ್ಯವೆಂದು ನೆನೆಯುತ್ತ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ವಿದ್ಯುತ್ ದೀಪ ನಂದಿ ಹೋಗಿತ್ತು, ಜಗುಲಿಯ ದೀಪ ಪ್ರಖರವಾಗಿ ಬೆಳಗುತ್ತ ಬೆಳಕು ಚಲ್ಲಿತ್ತು. ಆತ್ಮ ಬೆಳಕು; ಅನಂತ ಬೆಳಕು!.
ಲೇಖನ: ಬಸವರಾಜ ಮುದನೂರ್, ಪತ್ರಕರ್ತರು, ಚಿತ್ರದುರ್ಗ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!