E-PAPER
22 Nov 2026, 02:30:08 AM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಯಸ್ಸಿನ ದೃಢೀಕರಣಕ್ಕೆ ಆಧಾರ್‌ಗಿಂತ ಮರಣೋತ್ತರ ವರದಿಯೇ ಅಂತಿಮ: ಹೈಕೋರ್ಟ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಮೃತರ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ ಅನ್ನು ಅಧಿಕೃತ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮಂಗಳೂರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಮೃತರ ಕುಟುಂಬಸ್ಥರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಪೀಠ, "ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯೇ ಹೊರತು ಜನ್ಮ ದಿನಾಂಕದ ಖಚಿತ ದಾಖಲೆಯಲ್ಲ. ಶಾಲಾ ದಾಖಲೆಗಳಂತಹ ಇತರ ಅಧಿಕೃತ ಪುರಾವೆಗಳು ಲಭ್ಯವಿಲ್ಲದಿದ್ದಾಗ, ವೈಜ್ಞಾನಿಕ ಮೌಲ್ಯಮಾಪನವಾಗಿರುವ ಮರಣೋತ್ತರ ಪರೀಕ್ಷಾ (ಪೋಸ್ಟ್ ಮಾರ್ಟಮ್) ವರದಿಯಲ್ಲಿನ ವಯಸ್ಸನ್ನೇ ಅಂತಿಮವಾಗಿ ಪರಿಗಣಿಸಬೇಕು" ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ಪರಿಹಾರ ಹೆಚ್ಚಳ: 2021ರ ಡಿಸೆಂಬರ್ 18ರಂದು ಮೈಸೂರಿನಿಂದ ಗುರುವಾಯನಕೆರೆಗೆ ಕಾರಿನಲ್ಲಿ ತೆರಳುತ್ತಿದ್ದ ಶರೀಫ್ ಎಂಬುವವರು ಬೇಲೂರು ತಾಲೂಕಿನ ನವಿಲಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರು ನ್ಯಾಯಮಂಡಳಿಯು ಆಧಾರ್ ಕಾರ್ಡ್ ಆಧಾರದ ಮೇಲೆ ಮೃತರ ವಯಸ್ಸನ್ನು 36 ವರ್ಷ ಎಂದು ಪರಿಗಣಿಸಿ 26,73,100 ರೂ. ಪರಿಹಾರ ನಿಗದಿಪಡಿಸಿತ್ತು.

ಆದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಶರೀಫ್ ಅವರ ವಯಸ್ಸು 32 ವರ್ಷ ಎಂದು ನಮೂದಾಗಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್, ಪರಿಹಾರದ ಮೊತ್ತವನ್ನು 28,68,000 ರೂ.ಗಳಿಗೆ ಹೆಚ್ಚಳ ಮಾಡಿದೆ. ಅಲ್ಲದೆ, ಹೆಚ್ಚುವರಿಯಾಗಿ 1,95,000 ರೂ.ಗಳನ್ನು ಶೇ. 6ರ ಬಡ್ಡಿಯೊಂದಿಗೆ ಆರು ವಾರಗಳೊಳಗೆ ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ನಿರ್ದೇಶಿಸಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪುಸ್ತಕ ಪ್ರೀತಿ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಆಗಲಿದೆ : ಟಿ.ಸಿ.ಸುದೀಪಹಾಡೋನಹಳ್ಳಿ ಕೆ ವಿ ಕೆ ವತಿಯಿಂದ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವಹಣಕಾಸು ಸಾಕ್ಷರತ ಜಾಗೃತಿ ಕಾರ್ಯಕ್ರಮಕಾಲೇಜು ಆವರಣದಿಂದಲೇ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣ; ವಿಡಿಯೋ ವೈರಲ್ಅರ್ಹ ರೈತರಿಗೆ ತಕ್ಷಣ 5,000 ರೂ. ತಲುಪಿಸಲು ಡಿಸಿಎಂ ಪರಮೇಶ್ವರ್ ಖಡಕ್ ಸೂಚನೆಕಾವೇರಿ ವಿವಾದ: ತಮಿಳುನಾಡಿಗೆ ಸುಪ್ರೀಂನಲ್ಲಿ ಭಾರಿ ಹಿನ್ನಡೆ, ಕರ್ನಾಟಕಕ್ಕೆ ಕಾನೂನು ಜಯಸುಪ್ರೀಂನಲ್ಲಿ ತಮಿಳುನಾಡಿಗೆ ಮುಖಭಂಗ: ಆದರೂ ಕರ್ನಾಟಕಕ್ಕೆ ಕಾವೇರಿ ನೀರು ಹರಿಸಲು CWRC ಸೂಚನೆ!ಅಮಿತ್ ಶಾ ಭೇಟಿಯಾದ ಕುಮಾರಸ್ವಾಮಿ, ವಿಜಯೇಂದ್ರ: ಹಿರಿಯೂರು ಉಪಚುನಾವಣೆ ಚರ್ಚೆ?ದಾಂಪತ್ಯದ ಸಣ್ಣಪುಟ್ಟ ಜಗಳಗಳು ‘ಕ್ರೌರ್ಯ’ವಲ್ಲ: 18 ದಿನಕ್ಕೇ ವಿಚ್ಛೇದನ ಕೇಳಿದ್ದ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಪತ್ನಿಯನ್ನೇ ಕೊಂದು ಚೀಲದಲ್ಲಿ ತುಂಬಿಟ್ಟಿದ್ದ ಎರಡನೇ ಪತಿ ಅರೆಸ್ಟ್!