Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾರ್ವಜನಿಕರು ಶಿಕ್ಷಕರ ದಿನಾಚರಣೆ ಆಚರಿಸುವಂತಾಗಬೇಕು: ಡಾ ನೆಲ್ಲಿಕಟ್ಟೆ ಸಿದ್ದೇಶ್

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜ, ನಾಡು, ದೇಶದ ಅಭಿವೃದ್ಧಿಯ ಮೂಲ ಧಾತು ಶಿಕ್ಷಕರು, ಸರ್ವ ಕ್ಷೇತ್ರಗಳ ಪ್ರಗತಿ ಅವಲಂಬಿಸಿರುವುದು ಶಿಕ್ಷಕರನ್ನು ಪ್ರತಿ ಹಳ್ಳಿ ನಗರಗಳ ಸಾರ್ವಜನಿಕರು ರಾಜಕಾರಣಿಗಳು ಸಮುದಾಯಗಳು ಅಧಿಕಾರಿಗಳು ವಿವಿಧ ಇಲಾಖೆಗಳು ಶಿಕ್ಷಕರನ್ನು ಗೌರವಿಸುವ ಮೂಲಕ ಸಮೃದ್ಧ ಮತ್ತು ಸಮ ಸಮಾಜವನ್ನು ಕಟ್ಟಲು ಸಾಧ್ಯವಾಗುವಂತೆ ಶಿಕ್ಷಕರನ್ನು ಅಭಿನಂದಿಸುವಂತೆ ಶಿಕ್ಷಕ ದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತೀಯ ನಿರ್ದೇಶಕ ಡಾ ನೆಲ್ಲಿಕಟ್ಟೆ ಸಿದ್ದೇಶ್ ಅಭಿಪ್ರಾಯ ಪಟ್ಟರು.

ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ಹಿರಿಯೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ  ಡಾ ನೆಲ್ಲಿಕಟ್ಟೆ ಎಸ್ ಸಿದ್ದೇಶ ಹೇಳಿದರು.  
ಶಿಕ್ಷಕರಾಗಿ, ಪ್ರಾದ್ಯಾಪಕರಾಗಿ, ಕುಲಪತಿಗಳಾಗಿ, ರಾಷ್ಟ್ರಪತಿಯಾಗಿ ರಾಯಭಾರಿಯಾಗಿ, ಶಿಕ್ಷಣ ತಜ್ಞರಾಗಿ ಅಪೂರ್ವ ಸೇವೆ ಸಲ್ಲಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂತೆ ಶಿಕ್ಷಕರಾದ ನಾವುಗಳು ಸೇವೆ ಸಲ್ಲಿಸಬೇಕೆಂದರು.

Advertisement

 ಜ್ಞಾನಕ್ಕಿಂತ ಶ್ರೇಷ್ಠವಾದ ಹಾಗೂ ಪ್ರಬಲವಾದ ಶಕ್ತಿ ಮತ್ತೊಂದಿಲ್ಲ ಅಂತಹ ಜ್ಞಾನವನ್ನು ಬೋಧಿಸುವ ಶಿಕ್ಷಕ ಸಮುದಾಯಕ್ಕೆ ನಮ್ಮ ಸರ್ಕಾರಗಳು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯರಾದ ಡಿ ಟಿ ಶ್ರೀನಿವಾಸ್  ಮಾತನಾಡಿ ಶಿಕ್ಷಕರಿಗೆ ಅತಿ ಅಗತ್ಯವಾಗಿರುವಂತಹ ಗುರುಭವನವನ್ನು ಅಭಿವೃದ್ಧಿಪಡಿಸಲು ಅನುದಾನ ನೀಡುವೆ. ಶಿಕ್ಷಕರೇ ನಮ್ಮ ಸಮಾಜದ ಆಸ್ತಿ ಶಿಕ್ಷಕರು ಕೌಶಲ್ಯ ಆಧಾರಿತ ಬೋಧನೆಯನ್ನು ಮಾಡುವುದರ ಮೂಲಕ ಇಂದಿನ ತಾಂತ್ರಿಕ ಉಪಕರಣಗಳ ಬಳಕೆಯೊಂದಿಗೆ ವಿದ್ಯಾರ್ಥಿ ಗಳಲ್ಲಿ ಕಲಿಕಾ ಶಕ್ತಿಯನ್ನು ಹೆಚ್ಚಿಸಬೇಕು 

ನೌಕರರಿಗೆ ಹಳೇ ಪಿಂಚಣಿ ವೇತನ ಮರು ಜಾರಿಯಾಗುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ  ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಾಧನೆಯನ್ನು ಪರಿಚಯಿಸಿ, ತಾಲೂಕಿನ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವೃತ್ತಿ ಬದ್ಧತೆಯಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
 ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಅವರು ಮಾತನಾಡಿ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯ ಕಾರ್ಯಗಳನ್ನು ಶ್ಲಾಘಿಸಿದರು.
 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುನಂದಮ್ಮ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಲೋಹಿತ್ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಆರ್‌ಟಿ ಎಸ್ ಶ್ರೀನಿವಾಸ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ವಿ ಭಾಗ್ಯ, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷ ಸಿ ಪ್ರಸನ್ನ ಕುಮಾರ್, ಜೆ ಶಿವಲಿಂಗಪ್ಪ, ಕೃಷ್ಣುದಾ, ಸ್ವಪ್ನ, ತಿಪ್ಪೇಸ್ವಾಮಿ ತಾಲೂಕಿನ ವಿವಿಧ ಸಂಘ ಶಿಕ್ಷಕ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

28 ಉತ್ತಮ ಶಿಕ್ಷಕ ಪ್ರಶಸ್ತಿ 7 ಉತ್ತಮ ಶಾಲಾ ಪರಿಸ್ಥಿತಿ ನೀಡಲಾಯಿತು 76 ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಶಿವಾನಂದ ಸ್ವಾಗತಿಸಿದರು. ಪುಟ್ಟಸ್ವಾಮಿ ವಂದಿಸಿದರು. ಗಿರೀಶ್ ಮತ್ತು ರಾಧಾ ನಿರೂಪಿಸಿದರು. ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಲ್ಲರೂ ಭಾಗವಹಿಸಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನರ ಮನೆ ಬಾಗಿಲಿಗೆ ಸರ್ಕಾರ, ಪ್ರಜಾಸೇವಾ ಆಂದೋಲನಕ್ಕೆ ಸಚಿವ ರಘುಮೂರ್ತಿ ಚಾಲನೆಹಿರಿಯೂರು ನಗರಸಭೆಯಲ್ಲಿ ‘ಪ್ರಜಾಸೇವಾ ಆಂದೋಲನ’: ಸಚಿವರ ಸಮ್ಮುಖದಲ್ಲಿ ವಿವಿಧ ಸೌಲಭ್ಯಗಳ ವಿತರಣೆ!ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ನಿಶ್ಚಿತ್ ಪದಗ್ರಹಣ ಸಮಾರಂಭ ಹಿರಿಯೂರು ಭೋವಿ ಸಮಾಜದ ಅಧ್ಯಕ್ಷರಾಗಿ ತಿಮ್ಮರಾಜು ಆಯ್ಕೆ!ಹುಚ್ಚವ್ವನಹಳ್ಳಿ ಗ್ರಾಮಸ್ಥರ ಆರೋಗ್ಯದ ಜತೆ ಪಿಡಿಒ ಚೆಲ್ಲಾಟ – ಹೆಜ್ಜೆ ಹೆಜ್ಜೆಗೂ ಜನಾಕ್ರೋಶ!ಕೋಟೆನಾಡಿನತ್ತ ಮುಖ ಮಾಡಿದ ಭದ್ರೆ: ಸರ್ಕಾರ ಹಾಗೂ ಹೋರಾಟಗಾರರಿಗೆ ‘ಒಂದೇ ಮಾತರಂ ಜಾಗೃತಿ ವೇದಿಕೆ’ ಧನ್ಯವಾದ!ಸಾರ್ವಜನಿಕರು ಶಿಕ್ಷಕರ ದಿನಾಚರಣೆ ಆಚರಿಸುವಂತಾಗಬೇಕು: ಡಾ ನೆಲ್ಲಿಕಟ್ಟೆ ಸಿದ್ದೇಶ್ಪೌರಕಾರ್ಮಿಕರಿಗೆ ಅವಮಾನ: ಸಚಿವ ಕೃಷ್ಣ ಬೈರೇಗೌಡರು ಬಹಿರಂಗ ಕ್ಷಮೆಯಾಚಿಸಲು ಒತ್ತಾಯರೈತರ ಜನಾಕ್ರೋಶಕ್ಕೆ ಬೆದರಿದ ಸರ್ಕಾರ: ಪಾದಯಾತ್ರೆ ಧಕ್ಕೆಗೆ 'ಡ್ಯಾಮೇಜ್ ಕಂಟ್ರೋಲ್' ತಂತ್ರ ಎಂದ ವಿಪಕ್ಷ!  ಸಾಧಕ ಶಿಕ್ಷಕರ ಶ್ರಮಕ್ಕೆ ಗೌರವ ಸಲ್ಲಿಸಿದ ಆರ್. ಅಶೋಕ್ ಮತ್ತು ತೇಜಸ್ವಿ ಸೂರ್ಯ