Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

90 ಲಕ್ಷ ರೂಗೆ ಪಂಗನಾಮ ಖಂಡಿಸಿ ಚೇತನ್ ಗೌಡ ವಿರುದ್ಧ ರಾಮಾಂಜಿನಪ್ಪ ಆರೋಪ  

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ತಾಲೂಕಿನ ಬ್ಯಾಡರಹಳ್ಳಿ ಸರ್ವೆ ನಂ. 34/6, ಮತ್ತು ಗುಂಡ್ಲಹಳ್ಳಿಯ ಸರ್ವೆ ನಂಬರ್ 19 ಮತ್ತು 21 ರಲ್ಲಿ ಸುಮಾರು ಮೂರು ಎಕರೆ ಜಮೀನು (118 ಗುಂಟೆ ಗಿಂತ ಹೆಚ್ಚು ಜಮೀನು) ನಮ್ಮ ಪಿತ್ರಾರ್ಜಿತ ಆಸ್ತಿ. ರಾಮಾಂಜಿನಪ್ಪ ಆದ ನನ್ನ ಹೆಸರಿಗೆ ಪೌತಿ ಖಾತೆಯ ಮೂಲಕ 2020ರಲ್ಲಿ ಖಾತೆದಾರನಾಗಿ ನಮ್ಮ ಗ್ರಾಮದ ಕೆಲ ಜಮೀನುಗಳಾದ ಮೂರ್ತಿ ಮತ್ತು ಅವರ ಸಂಘಗಡಿಗರು ಬ್ರೋಕರ್ ಗಳಾಗಿ ನನ್ನ ಬಳಿ ಬಂದು ನೀವು ಕಷ್ಟದಲ್ಲಿದ್ದೀರಾ ನಿಮಗೆ ಹಣಕಾಸಿನ ಅವಶ್ಯಕತೆ ಇದೆ ಬಿಜೆಪಿಯ ಈಗಿನ ರಾಜ್ಯಾಧ್ಯಕ್ಷ ಬಿವೖ.

ವಿಜಯೇಂದ್ರ ಅವರಿಗೆ ಜಮೀನು ಕೊಡುವುದಿದ್ದರೆ ಹೇಳಿ ಖರೀದಿಸುವರು ಎಂದು ಸುಳ್ಳು ಹೇಳಿ ದೇವನಹಳ್ಳಿ ತಾಲೂಕಿನ ಜಟ್ನಹಳ್ಳಿಯ ಚೇತನ್ ಗೌಡ ಅವರ ಬಳಿ ನೇರವಾಗಿ ಕರೆದುಕೊಂಡು ಹೋಗದೆ ಪ್ರತಿ 1 ಎಕರೆಗೆ 42 ಲಕ್ಷ ರೂ ನಂತೆ 3 ಎಕರೆಗೆ 1 ಕೋಟಿ 20 ಲಕ್ಷಕ್ಕೆ ವ್ಯಾಪಾರ ಮುಗಿಸಿ ಮುಂಗಡವಾಗಿ ಕೇವಲ 1 ಲಕ್ಷರು ಕೊಟ್ಟು ಕೆಲ ತಿಂಗಳ ನಂತರ ನನ್ನ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ ಮೂಲಕ 15 ಲಕ್ಷ ಜಮಾ ಮಾಡಿ ಉಳಿದ 90 ಲಕ್ಷ ರೂಗಳ ಚೆಕ್ಕುಗಳನ್ನು ಕೊಡುತ್ತಾರೆ. ಸ್ವಲ್ಪ ದಿನದ ನಂತರ ನಿಮ್ಮ ಬ್ಯಾಂಕಿಗೆ ಹಾಕಿಕೊಳ್ಳಿ ಈಗಲೇ ಹಾಕಬೇಡಿ ಎಂದು ನಂಬಿಸಿ ದೇವನಹಳ್ಳಿ ಸಬ್ ರಿಜಿಸ್ಟರ್ ಆಫೀಸಿಗೆ ಕರೆದು ನಾನು ಮತ್ತು ನನ್ನ ಹೆಂಡತಿ ಇಬ್ಬರಿಂದ ಜುಟ್ಟನಹಳ್ಳಿ ಚೇತನ್ ಗೌಡ ಅವರಿಗೆ ಕ್ರಯಮಾಡಿತ್ತಾರೆ ಇದನ್ನು ಕೆಲ ತಿಂಗಳ ನಂತರ ಕ್ರಯ ಪತ್ರ ಬ್ರೋಕರ್ ನಿಂದ ನನಗೆ ಸಿಗುತ್ತದೆ. 

ಗಾಬರಿ ಗೊಂಡ ನಾನು ಆಗಿದ್ದು, ಆಗೋಗಿದೆ ಉಳಿದ ಹಣಕ್ಕಾಗಿ ನನ್ನ ಬ್ಯಾಂಕ್  ಖಾತೆಗೆ ಚಕ್ ಗಳನ್ನು ಹಾಕಲು ಹೊದರೆ ಆ ಬ್ಯಾಂಕಿನಲ್ಲಿ ಹಣವಿಲ್ಲ ಎಂದು ಬ್ಯಾಂಕ್ ಕ್ಯಾಶಿಯರ್ ಹೇಳುತ್ತಾರೆ. ಇದನ್ನು ತಿಳಿದ ನಾವು ತಮಗೆ ಜಮೀನು ಮಾರುವ ಅನಾನುಕೂಲ ಬಂದಿಲ್ಲ, ತಮ್ಮ ಹಣವನ್ನು ನಾನು ಹಿಂದಿರುಗಿಸುತ್ತೇನೆ. ನನ್ನ ಮಕ್ಕಳಿಗೂ ಜಮೀನು ಮಾರುವ ಮಾಹಿತಿ ತಿಳಿಸಿಲ್ಲ, ಮನೆಯಲ್ಲಿ ಜಗಳವಾಗುವ ಭೀತಿಇದೆ, ಮಕ್ಕಳಿಂದ ನಮಗೆ ತೊಂದರೆಯಾಗಬಹುದು ಎಂದು ಹೂಯಿಸಿ ಅದಕ್ಕಾಗಿ  ನನ್ನ ಜಮೀನು ಮರು ವಾಪಸ್ ನೀಡಿ  ಎಂದು ಎಷ್ಟು ಬಾರಿ ಅವರಲ್ಲಿ ಬೇಡಿದರು ನನ್ನ ಮಾತಿಗೆ ಬೆಲೆ ಇಲ್ಲದಂತೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನೂರಾರು ಸಾರಿ ಚೇತನ್ ಗೌಡರ ಮನೆಗೆ ಕಚೇರಿಗೆ ಅಲೆದಾಡಿ  ಸಾಕಾಗಿ ಹೋಗಿದೆ. ಜಮೀನು ಕೊಡಿಸಿದ ಬ್ರೋಕರುಗಳು ನಮ್ಮಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. 

ಈ ಹಿಂದೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ನಮ ಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದೇವೆ ಅಲ್ಲಿಯೂ ಕೂಡ ನನಗೆ ನ್ಯಾಯ ಸಿಗಲಿಲ್ಲ ಈಗ ನನಗೆ ಆದ ರೀತಿ ಮತ್ತೆ ಇನ್ಯಾರಿಗೂ ಆಗಬಾರದು ಎಂದು ಮಾಧ್ಯಮಗಳ ಮೂಲಕ ನ್ಯಾಯ ಕೇಳಲು ಬಂದಿದ್ದೇನೆ ನಾನು ಒಬ್ಬ ಅವಿದ್ಯಾವಂತ ನನಗೆ ದಯಮಾಡಿ ನ್ಯಾಯ ಕೊಡಿಸಲು ಪತ್ರಿಕಾಗೋಷ್ಠಿಯ ನಂತರ ವರದಿ ಆದರಿಸಿ ಘನ ನ್ಯಾಯಾಲಯ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲು ಸಜ್ಜಾಗಿದ್ದೇನೆ ಹಾಗಾಗಿ ತಾವೆಲ್ಲರೂ ನನಗೆ ಆದ ವಂಚನೆ ವಿರುದ್ಧ ಸುದ್ದಿ ಪ್ರಕಟಿಸುವಂತೆ ತಮ್ಮೆಲ್ಲರನ್ನು ಬೇಡುತ್ತಿದ್ದೇ ನೆಂದು ಅಳಲು ತೊಡಿಕೊಂಡರು.

ಈ ಸಂದರ್ಭದಲ್ಲಿ ಜಮೀನು ವಿವಾದ ಸಂತ್ರಸ್ಥ ಬ್ಯಾಡರಹಳ್ಳಿ ರಾಮಾಂಜಿನಪ್ಪ ಮಂಜುಳಾ, ಶ್ರೀಶಾ, ಅಕ್ಷಯ್ ಹಾಜರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!