Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ಹಿರಿಯೂರಿನಲ್ಲಿ ಚರಂಡಿ ನೀರಿನ ಅವಾಂತರ–ಸಾರ್ವಜನಿಕರ ಹಿತಕ್ಕಾಗಿ ಮುಂದಾದ ಸುಂದರಮೂರ್ತಿ

ಹಿರಿಯೂರಿನಲ್ಲಿ ಚರಂಡಿ ನೀರಿನ ಅವಾಂತರ–ಸಾರ್ವಜನಿಕರ ಹಿತಕ್ಕಾಗಿ ಮುಂದಾದ ಸುಂದರಮೂರ್ತಿ
ಕಲುಷಿತ ನೀರು ಮತ್ತು ಕಸದಿಂದ ತುಂಬಿದ ಚರಂಡಿ: ಸಾರ್ವಜನಿಕ ಆರೋಗ್ಯಕ್ಕೆ ಕುತ್ತು!

ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
​​ರಸ್ತೆ ಬದಿಯ ಹಿರಿಯೂರು ಟಿಬಿ ವೃತ್ತದ ಬಳಿಯ ಸೇತುವೆಯ ಕೆಳಗೆ ಹರಿಯುವ ಚರಂಡಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು
, ಕಸ-ತ್ಯಾಜ್ಯಗಳು ಮತ್ತು ಪ್ಲಾಸ್ಟಿಕ್ ಚೀಲಗಳು ತುಂಬಿ ತುಳುಕುತ್ತಿವೆ. ಚರಂಡಿಯ ಎರಡೂ ಬದಿಗಳಲ್ಲಿ ಮಣ್ಣು ಕುಸಿದಿದ್ದು, ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. 

​ಚರಂಡಿಯ ಈ ಅವ್ಯವಸ್ಥೆಯಿಂದಾಗಿ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ತಾಣವಾಗಿ ಬದಲಾಗಿದೆ. ಇದು ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಸಂಬಂಧಪಟ್ಟ ಆಡಳಿತ ಮಂಡಳಿ ಮತ್ತು ಸ್ಥಳೀಯ ಆಡಳಿತವು ಕೂಡಲೇ ಎಚ್ಚೆತ್ತುಕೊಂಡು, ಚರಂಡಿಯನ್ನು ಸ್ವಚ್ಛಗೊಳಿಸಿ, ಹೂಳು ತೆಗೆಸಿ, ರೋಗರುಜಿನಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸಲಾಗಿರುವ ಚಾನೆಲ್ ಪೈಪ್‌ಲೈನ್‌ಗೆ ವೇದಾವತಿ ನಗರದ ಚರಂಡಿ ನೀರನ್ನು ದುರ್ಬಳಕೆ ಮಾಡಿಕೊಂಡು ಬಿಟ್ಟಿರುವುದು ಈಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗದ ಭೀತಿ:
ವಿ.ವಿ ಸಾಗರದ ಚಾನೆಲ್‌ಗೆ ಚರಂಡಿ ನೀರು ನೇರವಾಗಿ ಸೇರುತ್ತಿರುವುದರಿಂದ ಇಡೀ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಹಾದಿಹೋಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು
, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಅಲ್ಲದೆ, ವೇದಾವತಿ ನಗರದ ಚರಂಡಿ ನೀರು ಹೆದ್ದಾರಿಯ ಪೈಪ್ ಮೂಲಕ ಚಾನೆಲ್‌ಗೆ ಸೇರಿ, ಅಲ್ಲಿ ಅಪಾರ ಪ್ರಮಾಣದ ಮಣ್ಣು ಮತ್ತು ತ್ಯಾಜ್ಯ ಶೇಖರಣೆಯಾಗಿತ್ತು. ಪರಿಣಾಮವಾಗಿ ನೀರು ಮುಂದುವರಿಯಲು ಅವಕಾಶವಿಲ್ಲದೆ ಒಂದೇ ಕಡೆ ನಿಂತು ಪರಿಸರ ಕಲುಷಿತಗೊಂಡಿತ್ತು.

ಇಲಾಖೆ ಮಾಡದ ಕೆಲಸ ಮಾಡಿದ ಸುಂದರ ಮೂರ್ತಿ:
ಚಾನೆಲ್ ಬಂದ್ ಆಗಿ ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆಯನ್ನು ಗಮನಿಸಿದ ಹೋಟೆಲ್ ಸುಂದರ ಮೂರ್ತಿ ಅವರು, ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದರು. ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ ಯಂತ್ರವನ್ನು ತರಿಸಿ, ತಮ್ಮ ಸ್ನೇಹಿತರಾದ ಮಂಜುನಾಥ್, ಮಹಂತೇಶ್, ಟಿಪ್ಪು ಸುಲ್ತಾನ್ ಹಾಗೂ ಮೂಡ್ಲಪ್ಪ ಅವರೊಂದಿಗೆಗೂಡಿ ಚಾನೆಲ್‌ನಲ್ಲಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಿದರು. ನೀರು ಸರಾಗವಾಗಿ ಹರಿಯುವಂತೆ ಮಾಡಿದ ಈ ಬಳಗದ ಸಾಮಾಜಿಕ ಕಾಳಜಿಗೆ ಚಾನೆಲ್ ಅಕ್ಕಪಕ್ಕದ ಸಾರ್ವಜನಿಕರು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಘವೇಂದ್ರ ಆಕ್ರೋಶ:
ನೈರ್ಮಲ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್. ಅವರು, "ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದ್ದ ಕರ್ತವ್ಯವನ್ನು ಸುಂದರ ಮೂರ್ತಿ ಮತ್ತು ಅವರ ಸ್ನೇಹಿತರು ಸ್ವಂತ ಖರ್ಚಿನಲ್ಲಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆ ಸರಿಯಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, "ಚರಂಡಿ ನೀರನ್ನು ಚಾನೆಲ್‌ಗೆ ಬಿಡುತ್ತಿರುವುದನ್ನು ತಕ್ಷಣವೇ ತಡೆದು, ಅದನ್ನು ಬೇರೆಡೆ ಮಾರ್ಗಸೂಚಿ ಮಾಡಬೇಕು. ಈ ಕಲುಷಿತ ನೀರು ಮುಂದೆ ಹಳ್ಳಿಗಳ ಭಾಗಕ್ಕೆ ಹರಿದಾಗ, ಅದನ್ನು ಕುಡಿಯುವ ಜಾನುವಾರು ಹಾಗೂ ಇತರ ಪ್ರಾಣಿಗಳ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲಹರಣ ಮಾಡದೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

news_1793969610_4_810.webp

 

news_1793969587_3_257.webp

 

news_1793969586_2_304.webp

 

ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರೇ ಬೆಲೆ ತೆರುವಂತಾಗಿರುವ ಈ ಪರಿಸ್ಥಿತಿಯಲ್ಲಿ, ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ನೈರ್ಮಲ್ಯ ಕ್ರಮ ಕೈಗೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ: ಕರ್ನಾಟಕಕ್ಕೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆಬುಡ ಸಮೇತ ಧರಾಶಾಯಿಯಾದ ಬೃಹತ್ ಮರ"ಕುರುಬರು ಕೆಟ್ಟು ಕುಂಚಿಟಿಗರಾದರು", "ಹಂಚಿಕಡ್ಡಿಗಾಗಿ ಕಂಚಿಪಟ್ಟಣ ಕೆಡಿಸಿ ಬಂದವರು ಕುಂಚಿಟಿಗರು"ಕುಂಚಿಟಿಗ ಸಮುದಾಯದ 'ಜಾನಕಲ್ಲೋರು' ಮತ್ತು 'ಜಲಧೇನೋರು' ಎಂಬ ಗೋತ್ರಗಳ ನಡುವೆ ನಡೆದ ಸಂಘರ್ಷದ ಕಥನಸಂಪುಟ ವಿಸ್ತರಣೆ ಮತ್ತು ಸ್ಟಿಂಗ್ ಚರ್ಚೆ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿ ಪ್ರವಾಸ  ಬೆಂಗಳೂರು ವಿಮಾನ ನಿಲ್ದಾಣ ಸಂಸ್ಥೆಗಳಿಂದ ಸ್ಥಳೀಯರಿಗೆ ಉದ್ಯೋಗ ಭರವಸೆ: ಕರವೇ ‘ಆಗ್ರಹ ಅಭಿಯಾನ’ದ ಸಭೆ ಯಶಸ್ವಿಪತ್ನಿ ಸೇರಿ ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ; ಆರೋಪಿ ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆಕಾಲ ಕೂಡಿ ಬಂದಾಗ ಎಲ್ಲವೂ ಸರಿಹೋಗಲಿದೆ: ಸಚಿವ ಸತೀಶ್ ಜಾರಕಿಹೊಳಿಹೊಸೂರಿನಲ್ಲಿ ಘೋರ ದುರಂತ: ಕಾರ್ಖಾನೆ ಕಟ್ಟಡದ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರ ಸಾವು