ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ಬೆಂಗಳೂರು ರಾಜ್ಯ ಘಟಕ) ವತಿಯಿಂದ ಸೆಪ್ಟೆಂಬರ್ 20 ರಂದು ದಾವಣಗೆರೆ ನಗರದ ಎ.ವಿ.ಕೆ. ರಸ್ತೆಯ ಗುರುಭವನದಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಷ್ಠಿತ 'ವಿದ್ಯಾರತ್ನ' ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಸಮಾರಂಭದಲ್ಲಿ ಬೆಂಗಳೂರು ವಿಭಾಗದಿಂದ ಒಟ್ಟು 18 ಜನ ಸಾಧಕ ಶಿಕ್ಷಕರು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪರಿಷತ್ತಿನ ಬೆಂಗಳೂರು ವಿಭಾಗದ ಕಾರ್ಯಾಧ್ಯಕ್ಷರಾದ ಬನ್ನಿಹಟ್ಟಿ ಮಲ್ಲೇಶ್ ಅಧಿಕೃತವಾಗಿ ತಿಳಿಸಿದ್ದಾರೆ.
ಬೆಂಗಳೂರು ವಿಭಾಗದ 'ವಿದ್ಯಾರತ್ನ' ಪ್ರಶಸ್ತಿ ವಿಜೇತರು:
ಕೋಲಾರ: ಎಸ್.ಎನ್. ಕೋದಂಡರಾಮಯ್ಯ, ಎನ್. ಮಂಜುಳ.
ಚಿತ್ರದುರ್ಗ: ಬಿ.ಜಿ. ಗೌರಮ್ಮ, ರಾಜು.ಜೆ.
ಬೆಂಗಳೂರು ಗ್ರಾಮಾಂತರ: ಸುವರ್ಣಮ್ಮ, ಸಿದ್ದಲಿಂಗಪ್ಪ.ಬಿ
ದಾವಣಗೆರೆ: ನಾಗವೇಣಿ.ಎಲ್, ಪ್ರಭು.ಬಿ
ಮಧುಗಿರಿ: ಮೋಹನ್.ಕೆ.ಜಿ, ಜ್ಯೋತಿಲಕ್ಷ್ಮಿ.ವಿ
ಶಿವಮೊಗ್ಗ: ವಿದ್ಯಾವತಿ.ಆರ್.ಕೆ, ಎಂ. ಮಹದೇವಪ್ಪ ತಾಳಗುಂದ
ಚಿಕ್ಕಬಳ್ಳಾಪುರ: ವಿ. ವೆಂಕಟೇಶ್, ಪದ್ಮ.ಟಿ
ತುಮಕೂರು: ಶಿವಾನಂದ ಕೆ.ಪಿ, ಶಶಿಕಲಾ.ಎನ್
ಬೆಂಗಳೂರು ದಕ್ಷಿಣ: ಸುಕನ್ಯ.ಎ, ಕೆಂಪರಾಜು.ಡಿ
ಭಾನುವಾರ ಬೆಳಿಗ್ಗೆ 10:30ಕ್ಕೆ ನಡೆಯಲಿರುವ ಈ ಅರ್ಥಪೂರ್ಣ ಸಮಾರಂಭದಲ್ಲಿ ಪ್ರಮುಖ ಗಣ್ಯರಾದ ದಾವಣಗೆರೆ ಲೋಕಸಭಾ ಸದಸ್ಯರಾದ ಪ್ರಭಾ ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ದಕ್ಷಿಣ ವಲಯದ ಶಾಸಕ ಸಮರ್ಥ ಶಾಮನೂರು, ಸಮಾರಂಭದ ನೇತೃತ್ವವಹಿಸಿರುವ ರಾಜ್ಯ ಘಟಕದ ರಾಜ್ಯಾಧ್ಯಕ್ಷೆ ರಮಾ ಆರ್, ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು ಬುಳ್ಳನವರ, ಗೌರವಾಧ್ಯಕ್ಷ ಎಲ್.ಎ. ಲಕ್ಕಮ್ಮನವರ ಹಾಗೂ ಮಹಾಪೋಷಕ ಮಲ್ಲಿಕಾರ್ಜುನ ತೊದಲಬಾಗಿ ವೇದಿಕೆಯಲ್ಲಿರಲಿದ್ದಾರೆ.
ಇವರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ಈ ರಾಜ್ಯಮಟ್ಟದ ಕಾರ್ಯಕ್ರಮವು ಜಿಲ್ಲೆಯಲ್ಲಿ ಶಿಕ್ಷಕ ಸಮುದಾಯದ ವಲಯದಲ್ಲಿ ಹೆಚ್ಚಿನ ಸಂಚಲನ ಮೂಡಿಸಿದೆ.




