ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಮ್ಮದೇಯಾದ ಅಮೂಲ್ಯಸೇವೆಯ ಮೂಲಕ ಲಕ್ಷಾಂತರ ಜನರ ಪ್ರೀತಿ,ವಿಶ್ವಾಸಕ್ಕೆ ಪಾತ್ರರಾದವರು ಈ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಸುಧಾಕರವರು. ಇಂದುಅವರು ಬೌದ್ದಿಕವಾಗಿ ನಮ್ಮಲ್ಲಿಲ್ಲವಾದರೂ ಅವರ ಸೇವಾಕಾರ್ಯಗಳು ಬಡವರಬಗ್ಗೆ ಅವರಿಗಿದ್ದ ಅಪಾರವಾದ ವಿಶ್ವಾಸ, ಕಾಳಜಿ, ನಿರಂತರ ಜನಸೇವೆ ಅವರನ್ನು ಸದಾಸ್ಮರಿಸುವಂತೆ ಮಾಡಿದೆ ಎಂದು ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮಿಸೇನೆಭಟ್ಟಾರಕ ಮಹಾಸ್ವಾಮಿ ತಿಳಿಸಿದರು.
ಅವರು, ಭಾನುವಾರ ನಗರದ ಅನಂತನಾಥಜೈನಭವನದಲ್ಲಿ ಇತ್ತೀಚೆಗೆ ನಮ್ಮನಗಲಿದ ಜಿಲ್ಲಾ ಉಸ್ತುವಾರಿ ಡಿ.ಸುಧಾಕರವರ ಪರೋಕ್ಷ ಕಟ್ಟಳೆ ಶಾಂತಿ ಪೂಜೆಯಲ್ಲಿ ಭಾಗವಹಿಸಿ, ಸುಧಾಕರವರ ಅನೇಕಕಾರ್ಯಕ್ರಮಗಳ ಬಗ್ಗೆ ಮಾಹಿತಿನೀಡಿದರು. ರಾಜಕೀಯಕ್ಷೇತ್ರದಲ್ಲೂ ಯಾರವಿರೋಧವನ್ನು ಕಟ್ಟಿಕೊಳ್ಳದೆ ಎಲ್ಲರಲ್ಲೂ ಸ್ನೇಹಮಯಿಯಾಗಿ ವರ್ತಿಸುತ್ತಿದ್ದರು. ಸಚಿವರಾಗಿ ಅವರು ಸಲ್ಲಿಸಿದ ಸೇವೆ ನಾಡಿನ ಜನರಮನದಲ್ಲಿಶಾಶ್ವತವಾಗಿ ಉಳಿಯುತ್ತದೆ. ಅವರ ಅಂತ್ಯಕ್ರಿಯೆಗೆ ನಾಡಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಮಂತ್ರಿಮಂಡಲ ಆಗಮಿಸಿತ್ತು. ಇದುಅವರ ನಿಸ್ವಾರ್ಥಸೇವೆಗೆ ಸಾಕ್ಷಿವೆಂದರು.
ಶಾಸಕ, ಸಣ್ಣಕೈಗಾರಿಕೆಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ,ಸುಧಾಕರ್ ಇಂದು ನಮ್ಮಲ್ಲಿಲ್ಲವೆಂದರೆ ನಂಬಲುಸಾಧ್ಯವಿಲ್ಲ. ಅವರೊಂದಿಗೆ ಸಾಕಷ್ಟುಹೆಚ್ಚುಒಡನಾಟಹೊಂದಿದ್ದೆ. ಭದ್ರಾ ಮೇಲ್ದಂಡೆ ಯೋಜನೆ ಅವರಕನಸಾಗಿದ್ದು, ಅದನ್ನುಸರ್ಕಾರ ನನಸುಮಾಡಬೇಕೆಂದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾತನಾಡಿ, ಯಾವುದೇ ಸಂದರ್ಭದಲ್ಲಿ ನಾನುಅವರನ್ನು ಭೇಟಿಮಾಡಿದರೂ ಭಾವನಾತ್ಮಕವಾಗಿ ಸ್ಪಂಧಿಸುತ್ತಿದ್ದರಲ್ಲದೆ, ಪಕ್ಕದಲ್ಲೆ ಕುಳಿತು ಆತ್ಮೀಯವಾಗಿ ಮಾತನಾಡುತ್ತಿದ್ದರು. ಸಮಸ್ಯೆಗಳಬಗ್ಗೆ ಕ್ಷಣಮಾತ್ರದಲ್ಲಿ ಪರಿಹಾರನೀಡುತ್ತಿದ್ದರು. ಸುಧಾಕರವರ ಸೇವಾಕಾರ್ಯ ಅವರನ್ನು ಮಹಾನ್‌ವ್ಯಕ್ತಿಯಾಗಿ ರೂಪಿಸಿದೆಎಂದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕಸರಬರಾಜು ನಿಗಮ ಅಧ್ಯಕ್ಷ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಬೋವಿನಿಗಮದ ಅಧ್ಯಕ್ಷ ನೇರಲಗುಂಟೆಎಂ.ರಾಮಪ್ಪ, ಪತ್ನಿ ಹರ್ಷಿಣಿಸುಧಾಕರ್, ಪುತ್ರ ಸುಹಾಸ್‌ಸುಧಾಕರ್, ಸಹೋದರರಾದ ಡಿ.ವಿಜಯಕುಮಾರ್, ಡಿ.ಎಸ್.ಕುಮಾರ್, ಡಿ.ಸುರೇಶ್‌ಕುಮಾರ್, ಭರತ್‌ರಾಜ್, ಸಹೋದರಿ ಕಲ್ಪನಾ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಿರಿಯಮುಖಂಡ ಟಿ.ಪ್ರಭುದೇವ್, ಎಂ.ಶಿವಲಿಂಗಪ್ಪ, ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್‌ಗೌಡ, ಶಂಕರಣ್ಣ, ಸಿ.ಶಿವಲಿಂಗಪ್ಪ, ಸಿ.ವೀರಭದ್ರಬಾಬು, ನಾಗಿರೆಡ್ಡಿ, ಎನ್.ಓಬಳೇಶ್, ಬಿ.ಸಿ.ಸಂಜೀವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.



