Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆತ್ತ ತಾಯಿಯನ್ನೇ ಮುದ್ದೆ ಕೋಲಿನಿಂದ ಹೊಡೆದು ಕೊಂದ ಮಗಳು, ಮೊಮ್ಮಗ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದ್ಯಪಾನದ ಚಟಕ್ಕೆ ಬಿದ್ದ ಮಗಳು ಮತ್ತು ಮೊಮ್ಮಗ ಸೇರಿ ಸ್ವಂತ ತಾಯಿಯನ್ನೇ ದೊಣ್ಣೆಯಿಂದ ಬಡಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜಧಾನಿಯ ಸುಭಾಷ್ ನಗರದಲ್ಲಿ ನಡೆದಿದೆ.

ಜೂನ್ 20ರ ಶನಿವಾರ ರಾತ್ರಿ ಈ ರಕ್ತಪಾತ ನಡೆದಿದ್ದು, ಜಯಮ್ಮ (70) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.

ಮುದ್ದೆ ಕೋಲಿನಿಂದ ತಲೆಗೆ ಏಟು; ಮನೆಯಲ್ಲೇ ಶವ ಮುಚ್ಚಿಟ್ಟರು!:
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಲೆಯಾದ ಜಯಮ್ಮ, ಆಕೆಯ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಮೂವರಿಗೂ ತೀವ್ರ ಮದ್ಯಪಾನದ ಚಟವಿತ್ತು. ಜೂನ್ 20ರ ರಾತ್ರಿ ಎಂದಿನಂತೆ ಮದ್ಯ ಸೇವಿಸುವ ವಿಚಾರವಾಗಿಯೇ ತಾಯಿ-ಮಗಳ ನಡುವೆ ಗಲಾಟೆ ಆರಂಭವಾಗಿದೆ.

ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ, ಭಾಗ್ಯಲಕ್ಷ್ಮಿ ಮತ್ತು ಆಕೆಯ ಮಗ ಕುಶಾಲ್ ಇಬ್ಬರೂ ಸೇರಿ ಜಯಮ್ಮರ ತಲೆಗೆ ರಾಗಿ ಮುದ್ದೆ ಮಾಡುವ ಕೋಲಿನಿಂದ (ಮುದ್ದೆ ದೊಣ್ಣೆ) ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ವೃದ್ಧೆ ಜಯಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಯಾರಿಗೂ ತಿಳಿಯದಂತೆ ಶವವನ್ನು ಮನೆಯೊಳಗೇ ಬಚ್ಚಿಟ್ಟು ಹೈಡ್ರಾಮಾ ಮಾಡಿದ್ದಾರೆ.

"ಅಜ್ಜಿ ತೀರಿಕೊಂಡಿದ್ದಾಳೆ, ಕುಡಿಯಲು ಎಣ್ಣೆ ತಗೊಂಡು ಬಾ!":
ಕೊಲೆ ನಡೆದ ಕೆಲ ಹೊತ್ತಿನ ಬಳಿಕ ಮೊಮ್ಮಗ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, "ನಮ್ಮ ಅಜ್ಜಿ ತೀರಿಕೊಂಡಿದ್ದಾಳೆ. ನನಗೆ ತಲೆ ಕೆಟ್ಟುಹೋಗಿದೆ, ನೀನು ಬರುವಾಗ ಕುಡಿಯಲು ಮದ್ಯ (ಲಿಕ್ಕರ್) ತಗೊಂಡು ಬಾ" ಎಂದು ಹೇಳಿದ್ದಾನೆ. ಅಜ್ಜಿಯ ಸಾವಿನ ಸುದ್ದಿ ಕೇಳಿ ಮದ್ಯದ ಬಾಟಲಿಯೊಂದಿಗೆ ಮನೆಗೆ ಬಂದ ಸ್ನೇಹಿತ, ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯಮ್ಮರ ಶವ ನೋಡಿ ಬೆಚ್ಚಿಬಿದ್ದಿದ್ದಾನೆ. ತಕ್ಷಣವೇ ಆತ ಅಲ್ಲಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಹಾಸನದಿಂದ ಬಂದಿದ್ದ ಅಜ್ಜಿ; ದಿನವೂ ನಡೆಯುತ್ತಿತ್ತು ಕುಡುಕರ ಗಲಾಟೆ
ಪೊಲೀಸ್ ತನಿಖೆಯ ವೇಳೆ ಸುತ್ತಮುತ್ತಲಿನ ನಿವಾಸಿಗಳು ಈ ಕುಟುಂಬದ ಬಗ್ಗೆ ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಪತಿ ಪ್ರತ್ಯೇಕ ವಾಸ: ಮಗಳು ಭಾಗ್ಯಲಕ್ಷ್ಮಿ ವಿಪರೀತ ಮದ್ಯಪಾನ ಮಾಡುತ್ತಿದ್ದ ಕಾರಣಕ್ಕೆ ಆಕೆಯ ಪತಿ ಈ ಮೊದಲೇ ಬೇರೆ ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಹಾಸನದಿಂದ ಬಂದಿದ್ದ ಅಜ್ಜಿ: ಕಳೆದೆರಡು ತಿಂಗಳ ಹಿಂದೆಯಷ್ಟೇ ಹಾಸನದಿಂದ ಜಯಮ್ಮ ಅವರು ಮಗಳು ಮತ್ತು ಮೊಮ್ಮಗನಿಗೆ ಬುದ್ಧಿ ಹೇಳಲು ಹಾಗೂ ಅವರ ಜೊತೆ ಇರಲು ಸುಭಾಷ್ ನಗರದ ಮನೆಗೆ ಬಂದಿದ್ದರು.

ನಿತ್ಯ ನರಕ: ಜಯಮ್ಮ ಬಂದಾಗಿನಿಂದಲೂ ಮನೆಯಲ್ಲಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಮನೆಯಲ್ಲಿದ್ದವರೆಲ್ಲರೂ ದಿನವೂ ಮದ್ಯ ಸೇವಿಸಿ ಜೋರಾಗಿ ಕಿರುಚಾಡುತ್ತಾ ಗಲಾಟೆ ಮಾಡಿಕೊಳ್ಳುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸ್ ಆಕ್ಷನ್: "ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳಾದ ಭಾಗ್ಯಲಕ್ಷ್ಮಿ ಮತ್ತು ಕುಶಾಲ್‌ನನ್ನು ಅರೆಸ್ಟ್ ಮಾಡಲಾಗಿದೆ. ಇಬ್ಬರ ಮೇಲೂ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಕರ್ತರ ಬೇಡಿಕೆ ಬಗ್ಗೆ ಚರ್ಚೆ, ಸಿಎಂ ಡಿಕೆಶಿ ಭೇಟಿ ಮಾಡಿದ ಕೆಯುಡಬ್ಲೂಜೆ ಅಧ್ಯಕ್ಷ ತಗಡೂರುಮಕ್ಕಳ ಅಪರಾಧಗಳು; ಕಳೆದುಹೋಗುತ್ತಿರುವ ಮುಗ್ಧತೆಎಲ್ಲಾ ಶಕ್ತಿಯೂ ನಮ್ಮೊಳಗೆ ಇದೆ ಅದರಲ್ಲಿ ವಿಶ್ವಾಸವಿರಬೇಕು:ಮಾತಾಜೀ ತ್ಯಾಗಮಯೀಗ್ಯಾರಂಟಿ ನೆಪದಲ್ಲಿ ಬೊಕ್ಕಸಕ್ಕೆ ಕನ್ನ, ತಕ್ಷಣ ಶ್ವೇತಪತ್ರ ಹೊರಡಿಸಿ: ಗೃಹಲಕ್ಷ್ಮಿ ಹಗರಣದ ವಿರುದ್ಧ ಜೆಡಿಎಸ್ ಆಕ್ರೋಶಬಿಡದಿ ಟೌನ್‌ಶಿಪ್ ಸಭೆ: ಸ್ಥಳ ಮತ್ತು ದಿನಾಂಕ ಬದಲಾಯಿಸಲು ಡಿ.ಕೆ. ಶಿವಕುಮಾರ್‌ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಕ್ರೀಡಾ ಸಂಸ್ಥೆಗಳಿಗೆ 11.65 ಕೋಟಿ ವಿಶೇಷ ಅನುದಾನ, ಒಲಿಂಪಿಕ್ ಪದಕ ವಿಜೇತರಿಗೆ ಕೋಟ್ಯಂತರ ರೂ. ಬಹುಮಾನ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್"ಕ್ಯಾಮೆರಾ ಹಿಂದೆ ಲೂಟಿ, ಮುಂದೆ ನಾಟಕದ ಚಾಟಿ": ಡಿಕೆಶಿ-ಕೃಷ್ಣ ಬೈರೇಗೌಡ ಶೀತಲ ಸಮರ ಬಯಲಿಗೆಳೆದ ಆರ್. ಅಶೋಕ್ಗೃಹಲಕ್ಷ್ಮಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ಗಂಭೀರ ಆರೋಪ6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ