Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ಅವರ ಕಾಲದ ದುರಾಡಳಿತದ ಪಟ್ಟಿ ಸಾಕಷ್ಟಿದೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಸುದೀರ್ಘ ಅವಧಿಯ ಸಿಎಂ ಎಂದು ದಾಖಲೆ ಮಾಡಿರುವ ಸಿದ್ದರಾಮಯ್ಯ ಅವರ ಕಾಲದ ದುರಾಡಳಿತದ ಪಟ್ಟಿ ಸಾಕಷ್ಟಿದೆ ಎಂದು ಜೆಡಿಎಸ್ ದೂರಿದೆ.


 ರಾಜ್ಯದಲ್ಲಿ ಅತೀ ಹೆಚ್ಚು ಕೋಮುಗಲಭೆ ಮತ್ತು ಹಿಂಸಾಚಾರ, ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1 ರಾಜ್ಯ ಆಗಿದ್ದು, ಭ್ರಷ್ಟಾಚಾರ ಆರೋಪದಲ್ಲಿ  ಕಾಂಗ್ರೆಸ್ ಪಕ್ಷದ ಅತಿ ಹೆಚ್ಚು ಶಾಸಕರು ಜೈಲು ಸೇರಿದ್ದು ಎಂದು ಜೆಡಿಎಸ್ ಆರೋಪಿಸಿದೆ.


 ಅತೀ ಹೆಚ್ಚು ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ವಾಲ್ಮೀಕಿ ನಿಗಮ, ಭೋವಿ ನಿಗಮಅಂಬೇಡ್ಕರ್ ನಿಗಮದ ಹಣ, SCP/TSP ಅನುದಾನ ಸೇರಿದಂತೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.


ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಬದುಕು ನರಕ ಮಾಡಿದ್ದು ರಸ್ತೆ ಗುಂಡಿಯನ್ನು ಮುಚ್ಚದೆ ಅನೇಕರನ್ನು ಅಮಾಯಕರನ್ನು ಬಲಿ ಪಡೆದಿದ್ದು ಜಾತಿ ಜಾತಿಗಳ ಮಧ್ಯೆ ದ್ವೇಷದ ಬೆಂಕಿ ಹಚ್ಚಿದ ಜಾತಿವಾದಿ ಸಿಎಂ ಆಗಿ ಅತೀ ಹೆಚ್ಚು ಸಾಲ ಮಾಡಿದ ಸಾಲಗಾರ ಸಿದ್ದರಾಮಯ್ಯನವರ ಟ್ರ್ಯಾಕ್ ರೆಕಾರ್ಡ್ ಇನ್ನೂ ಇದೆ ಎಂದು ಜೆಡಿಎಸ್ ಆರೋಪಿಸಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST