ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇಶಾದ್ಯಂತ ನೆನ್ನೆ ಬಕ್ರಿದ್ ಹಬ್ಬವಿದ್ದು ಹಬ್ಬದ ಹಿಂದಿನ ದಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದಲ್ಲಿ ನಗರದ ಹೊರವಲಯದ ಕಂಟನಕುಂಟೆ ಸಮೀಪ ಚೆಕ್ ಪೊಸ್ಟ್ ಸ್ಥಾಪಿಸಿ ವಾಹನಗಳ ತಪಾಸಣೆ ಮಾಡಲಾಗಿತಿತ್ತು.
ಈ ವೇಳೆ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ಅನುನಮಾನ್ಪದವಾಗಿ ಸಾಗುತಿದ್ದ ವಾಹನವೊಂದನ್ನು ತಡೆದು ತಪಾಸಣೆ ಮಾಡಿದಾಗ ನಾಲ್ಕು ಸಿಂದಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತಿದ್ದ ವಿಷಯ ತಿಳಿದು ಬಂದಿದೆ.
ಪ್ರತಿ ಹಸುವಿನ ಬೆಲೆ 50 ಸಾವಿರಕ್ಕೂ ಅಧಿಕ ಎಂದು ತಿಳಿದು ಬಂದಿದೆ. ಗೋವುಗಳ ಸಾಗಾಟ ಮಾಡುತಿದ್ದ ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಯ ಯತೀಶ್ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಕ್ರಿದ್ ಹಿನ್ನೆಲೆಯಲ್ಲಿ ಗೋವುಗಳ ಸಾಗಾಟ ಮಾಡುತ್ತಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.



