ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ನಗರದ ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2026-27 ನೇ ಸಾಲಿನ ಕಲಾ ವಾಣಿಜ್ಯ ವಿಜ್ಞಾನ ವಿಬಾಗಗಳ ಪ್ರಾರಂಬೋತ್ಸವದ ದಿ ರೖಸಿಂಗ್ ಸ್ಟಾರ್ಸ್ 2026 " ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕೊಂಗಾಡಿಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮೇಜರ್ ಎಸ್ ಮಹಾಬಲೇಶ್ವರ್ ರವರು ಉದ್ಘಾಟಿಸಿ ಮಾತನಾಡಿ ಯುವಕರು ಅದರಲ್ಲೂ ಪಿಯುಸಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಜೀವನದಲ್ಲಿ ಯಾವುದು ಮುಖ್ಯ ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಗೊಂದಲವಿರುತ್ತದೆ.
ಅದಕ್ಕೆ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ತಂದೆ ತಾಯಿಗಳ ಮಾತುಗಳನ್ನು ಚಾಚು ತಪ್ಪದೆ ಪಾಲಿಸಬೇಕು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬಹಳ ಮುಖ್ಯ ಸ್ವಲ್ಪ ಮೈ ಮರೆತರೆ ನಿಮ್ಮ ಜೀವನವೇ ಹಾಳಾಗುತ್ತದೆ ಅದುದರಿಂದ ಮೌಲ್ಯಾದಾರಿತ ಶಿಕ್ಷಣ ಬದುಕಿನ ದಾರಿದೀಪ.ಅದನ್ನು ಬತ್ತಲು ಬಿಡಬೇಡಿ ನಿಮ್ಮ ಮನುಸ್ಸು ನಿಮ್ಮ ನಿಯಂತ್ರಣದಲ್ಲಿರಲಿ ಎಂದು ಕಿವಿ ಮಾತು ಹೇಳಿದರು
ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಡಾ:ನವೀನ್ ಕುಮಾರ್ ಎಂ. ಬಿ.ಮಾತನಾಡಿ ಒಂದು ದೇಶದ ಭವಿಷ್ಯ ಅಭಿವೃದ್ಧಿ ಯುವ ಜನಾಂಗದ ಅದರಲ್ಲೂ ವಿದ್ಯಾರ್ಥಿಗಳ ಕೈ ಯಲ್ಲಿರುತ್ತದೆ. ಯುವಕರು ದಾರಿತಪ್ಪಿದರೆ ದೇಶ ವಿನಾಶದತ್ತ ಸಾಗುತ್ತದೆ. ಇಂದಿನ ಬಹುತೇಕ ಯುವಕರು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಹೀಗಾಗಿ ದೇವನೂರು ಮಹಾದೇವ ರವರ "ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ "ಒಂದಲ್ಲಾ ಒಂದು ದಿನ ಪಲ ಕೊಟ್ಟೆ ಕೊಡುತ್ತದೆ ಎನ್ನುವ ಮಾತು ಸುಳ್ಳಲ್ಲ.ಅದುದರಿಂದ ನಾವು ಯಾವುದನ್ನೂ ಬಿತ್ತ ಬೇಕು ಎಂಬುದು ನಿಮ್ಮ ಕೈ ಯಲ್ಲಿದೆ.ನಿರ್ದಾರ ನಿಮ್ಮದು ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನುಮಂತೇಗೌಡ ಮಾತನಾಡಿ ವಿದ್ಯಾರ್ಥಿಗಳು ತಂದೆ ತಾಯಿ ಗುರು ಹಿರಿಯರ ಜೊತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಶಿಸ್ತು ಸಮಯಪ್ರಜ್ಞೆ ಬಹಳ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಾವಣ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್,ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ.ಜಿ ಕೃಷ್ಣಮೂರ್ತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಕಂಟನಕುಂಟೆಯ ಬಿಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಪ್ಪ,ಲಾವಣ್ಯ ವಿದ್ಯಾಸಂಸ್ಥೆಯ ಎಲ್ಲಾ ವಿಭಾಗಗಳ ಉಪನ್ಯಾಸಕರು ಶಿಕ್ಷಕರು ವಿದ್ಯಾರ್ಥಿ/ವಿದ್ಯಾರ್ಥಿ ನಿಯರು ಬಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು ನೋಡುಗರ ಮನ ಸೆಳೆದಿತ್ತು.



