E-PAPER
24 Nov 2026, 07:35:59 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ವಿಶ್ವೇಶ್ವರ ಭಟ್ಟನ ಪಿತೂರಿ ಬರಹಗಳೆ ಸಂಶೋಧಕ ಎಂ.ಎಂ ಕಲಬುರ್ಗಿ ಹತ್ಯೆಗೆ ಕಾರಣ

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರ "ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ" ಎಂದು ಬಿಂಬಿಸಿದ್ದನ್ನೆ ಸಹಿಸದ ವೈದಿಕ ಮನಸ್ಸುಗಳು, ಈಗಲೂ ಬಸವಣ್ಣನವರನ್ನು, ಲಿಂಗಾಯಿತ ಧರ್ಮವನ್ನು ಅವಹೇಳನ ಮಾಡುತ್ತಿವೆ.

12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿಯ ವಿಫಲತೆಗೆ ಕಾರಣವಾದ ಮನಸ್ಸುಗಳೆ ಈಗಲೂ ಕುತಂತ್ರ ಮಾಡುತ್ತಿವೆ.  "ಬಸವ ಮಂಟಪ" ಎಂಬ ಹೆಸರಿನ ಕೃತಿಯಲ್ಲಿ ಉದ್ದೇಶಪೂರ್ವಕ ಕೆಟ್ಟ ಪದಗಳಿಂದ ತೇಜೋವಧೆ ಮಾಡಲಾಗಿದೆ.

ಲಿಂಗಾಯಿತರನ್ನೆ 'ಲಿಂಗಾ ಹತರು' ಎಂದು ಮೂದಲಿಸಿದ ಲೇಖಕ ರವಿ ಹಂಜ (ರವಿ ಹಂಜಗಿಮಠ) ಬಸವಣ್ಣನವರನ್ನು ಕಳ್ಳ, ಕೊಲೆಗಡುಕ ಎಂದು ನೀಚತನ ಹಾಗೂ ಅಸಹನೆಯಿಂದ  ಬಿಂಬಿಸಿ,  ಸಂದರ್ಶನಗಳಲ್ಲು ಮಾತಾಡಿದ್ದಾನೆ.

ಇದಕ್ಕೆ ಬೆಂಬಲ ಕೊಟ್ಟು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ, ಪುಸ್ತಕ ರೂಪದಲ್ಲಿ ತಂದ ವಿಶ್ವೇಶ್ವರ ಭಟ್ಟ ಅಲಿಯಾಸ್ "ವಿಷಭಟ್ಟ" ಅನಗತ್ಯ ಕೆಸರೆರಚಾಟಕ್ಕೆ ನಿಂತು ಲಿಂಗಾಯಿತರು ಕೆರಳುವಂತೆ ಮಾಡಿದ್ದಾನೆ.

ಇವನ ಈ ಕಹಿ ಮನಸ್ಸು ಇವತ್ತಿನದಲ್ಲ. ಅವನ ಬದುಕಿನದ್ದಕ್ಕು ದುಷ್ಟತನವನ್ನೆ ಮೆರೆದು ಮಾಧ್ಯಮ ಕ್ಷೇತ್ರವನ್ನೆ ಕಲುಷಿತಗೊಳಿಸಿದ ಅಪಕೀರ್ತಿ ಈತನಿಗೆ ಸಲ್ಲುತ್ತದೆ. ಈತ ಹಿರಿಯ ಸಾಹಿತಿಗಳನ್ನು ಅವಮಾನಿಸುತ್ತಿದ್ದ. ಯು.ಆರ್. ಅನಂತಮೂರ್ತಿ ಹಾಗೂ ಎಸ್.ಎಲ್. ಭೈರಪ್ಪ ಅವರಿಬ್ಬರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯವನ್ನೆ ದೊಡ್ಡದು‌ಮಾಡಿ ಅನಂತಮೂರ್ತಿ ವಿರುದ್ಧವೆ ಓದುಗರನ್ನು ಎತ್ತಿಕಟ್ಟಿ ಮುಖಪುಟದಲ್ಲೆ ವಾಚಕರ ಅವಹೇಳನಕರ ಪತ್ರಗಳನ್ನು ಬರೆಯಿಸಿ ಪ್ರಕಟಿಸಿ, ಅವರಿಗೆ ಮುಖಭಂಗ ಮಾಡಿದ್ದ.

ಸಿದ್ದಲಿಂಗ ಪಟ್ಟಣಶೆಟ್ಟರ ಬಗ್ಗೆ ಕ್ಷುಲ್ಲಕವಾಗಿ ಬರೆದ. ಈತ ಬೆಳೆಸಿದ ಕೆಲವು ಶನಿ ಸಂತಾನ ಪತ್ರಕರ್ತರು ಇವನದ್ದೆ ವಿಷ ಬುದ್ದಿ ಹೊಂದಿದ್ದಾರೆ!.  ಈತ ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ಅವರ ಹತ್ಯೆಗೂ ಕಾರಣ ಎಂದು ನಾನು ಆಪಾದಿಸುತ್ತ ಬಂದದ್ದನ್ನೆ ನ.22 ರಂದು ಮಾಧ್ಯಮಗಳಲ್ಲಿ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಅವರು ಅದನ್ನೇ ಹೇಳಿದ್ದಾರೆ.

"ಸಂಶೋಧಕ ಎಂ.ಎಂ ಕಲಬುರ್ಗಿ ಅವರು ಯು.ಆರ್ ಅನಂತಮೂರ್ತಿ ಅವರ ಕುರಿತು ಒಂದು ಕಾರ್ಯಕ್ರಮದಲ್ಲಿ ಆಡಿದ ಮಾತನ್ನು, ಹಿಂದೂಗಳ ಅವಹೇಳನ ಎಂಬಂತೆ ವಿಶ್ವೇಶ್ವರ ಭಟ್ಟ ತಾವು ಹಿಂದೆ ಸಂಪಾದಕರಾಗಿದ್ದ ಪತ್ರಿಕೆ ಒಂದರಲ್ಲಿ ಸಾಲು ಸಾಲು ಬರಹಗಳನ್ನು ಪ್ರಕಟಿಸಿದ್ದರು.

ಈ ಬರಹಗಳಿಂದ ಕುಮ್ಮಕ್ಕು ಪಡೆದ ಗುಂಪೇ ಎಂ.ಎಂ ಕಲಬುರ್ಗಿ ಅವರನ್ನು ಹತ್ಯೆ ಮಾಡಿತು. ಗೌರಿ ಲಂಕೇಶ ಅವರನ್ನು ಕೊಂದಿತು. ಈ ಎರಡು ಪ್ರಕರಣಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಇಂತಹ ಕುಮ್ಮಕ್ಕು ನೀಡುವ ಕೆಲಸವನ್ನು ಮಾಡುತ್ತಲೇ ಬಂದಿರುವ ವಿಶ್ವೇಶ್ವರ ಭಟ್ಟ ಈಗ ಸಮಾಜದ ಶಾಂತಿ ಕದಡುವ ಉದ್ದೇಶದಿಂದ ರವಿಹಂಜಗೆ ಕುಮ್ಮಕ್ಕು ನೀಡುತ್ತಿದ್ದಾರೆ" (ಎಸ್.ಎಂ. ಜಾಮದಾರ : ಪ್ರಜಾವಾಣಿ: ಪುಟ 4,  ರಾಜ್ಯ ಸುದ್ದಿ) ಈಗ ಈ ಭಟ್ಟನಿಗೆ ಬಂಧನದ ಭೀತಿ ಹೆಚ್ಚಾಗುತ್ತಿದ್ದಂತೆ ಆಸ್ಟ್ರೇಲಿಯಾ ದೇಶಕ್ಕೆ ಪಲಾಯನ ಮಾಡಿದ್ದಾನೆ. ಹಾಗೆಂದು ಅವನೆ ಹೇಳಿಕೊಂಡಿದ್ದಾನೆ. ಅವನಿಗೆ ವಾಪಾಸು ಕರೆಯಿಸಿ ಬಂಧನ ಮಾಡಿ, ಶಿಕ್ಷಿಸಬೇಕು.

ಈ ಹಿನ್ನೆಲೆಯಲ್ಲಿ ಕಲಬುರ್ಗಿ ಅವರ ಹತ್ಯೆಯ ಸಂಚಿನ ಭಾಗವಾಗಿದ್ದ ಆತಂಕದ‌ವಿಚಾರಗಳನ್ನು  ಹತ್ತು ವರ್ಷಗಳ ಹಿಂದೆಯೆ ಬರೆದ ನನ್ನ ಬರಹದ ಸಂಕ್ಷಿಪ್ತ ಭಾಗ ಇಲ್ಲಿದೆ.

5, ಸೆಪ್ಟಂಬರ್ 2016.. ("ಹೆದ್ದಾರಿ ಕವಲು" - (ಅಂಕಣ ಬರಹ) 'ನನ್ನ ಮಾತು : ಪುಟ 18 - 24) 10 ವರ್ಷದ ಹಿಂದೆ ಪ್ರಕಟವಾದ ನನ್ನ ಕೃತಿಯಲ್ಲಿನ ದಾಖಲೆಯ ಕೆಲವು ಸಾಲುಗಳನ್ನು ಸಾಂದರ್ಭಿಕವಾಗಿ ಕೆಳಗೆ ಕೊಟ್ಟಿದ್ದೇನೆ.

ಹಿರಿಯ ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ಅವರಿಗೆ "ಕನ್ನಡಪ್ರಭ", ಮತ್ತೊಂದು ಪತ್ರಿಕೆ ಹಾಗೂ ಒಂದೆರಡು ವಿದ್ಯುನ್ಮಾನ ಮಾಧ್ಯಮಗಳು ನೀಡಿದ ಕಿರುಕುಳ ಅಷ್ಟಿಷ್ಟಲ್ಲ. ಆ ಸಂದರ್ಭದಲ್ಲಿ ನಿರಂತರವಾಗಿ ಇವರ ವಿರುದ್ಧ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಬರಹದಿಂದ ಅವೆರಷ್ಟು ಕುಗ್ಗಿ ಹೋಗಿದ್ದರೆಂದರೆ, "ಈ ಪತ್ರಿಕೆ ನನ್ನ ಹತ್ತು ವರ್ಷದ ಆಯುಷ್ಯ ಕಡಿಮೆ ಮಾಡಿಬಿಡ್ತು" ಎಂದು ನೋವು, ಬೇಸರ ಹಾಗೂ ದುಃಖದಿಂದ ತಮ್ಮ ಪತ್ನಿಜೊತೆ ಹೇಳಿದ್ದ ಘಟನೆಯೊಂದು ಧಾರವಾಡದ 2016ರ ಸಾಹಿತ್ಯ ಸಂಭ್ರಮದಲ್ಲಿ ಅನುರಣನಗೊಂಡಿತು. ಆಹ್ವಾನಿತನಾಗಿ ಭಾಗವಹಿಸಿ ಪ್ರೇಕ್ಷಕರ ನಡುವೆ ಕೂತು ಚರ್ಚೆಯ ಸಂದರ್ಭದಲ್ಲಿ "ಕನ್ನಡಪ್ರಭ"ದ ಬರಹಗಳೆ ಅವರ ಹತ್ಯೆಗೆ ಕಾರಣ. ಸಂಪಾದಕ ಭಟ್ಟರು ಉತ್ತರಿಸಬೇಕು" ಎಂಬ ನನ್ನ ಮಾತು ಅವರನ್ನು ಕೆರಳಿಸಿತ್ತು. ಏನೇನೋ ಬಡಬಡಿಸಿ ಆಕ್ರೋಷಗೊಂಡದ್ದು ಉಂಟು.

 

ಬೆಂಗಳೂರಿನಲ್ಲಿ ನಡೆದ ರಾಜ್ಯ ವಿಜ್ಞಾನ ಪರಿಷತ್ತಿನ  ಸಭೆಯಲ್ಲಿ ಕಲಬುರ್ಗಿ ಹೇಳಿದ ಘಟನೆ ಯು.ಆರ್. ಅನಂತಮೂರ್ತಿ ಅವರ ಬಾಲ್ಯ ಸಹಜ ಕುತೂಹಲಕ್ಕೆ ಸಂಬಂಧಿಸಿದ್ದಾಗಿತ್ತು. 'ಬಾಲ್ಯದಲ್ಲಿ ಪೂಜಿಸುವ ವಿಗ್ರಹವೊಂದರ ಮೇಲೆ ಉಚ್ಛೆ ಮಾಡಿದ್ದೆ. ನನಗೇನನೂ ಆಗಲಿಲ್ಲ' ಎಂದು ಅನಂತಮೂರ್ತಿ ಹೇಳಿದ್ದ 'ಬೆತ್ತಲೆ ಪೂಜೆ ಏಕೆ ಸಲ್ಲದು?” ಎಂಬ ಪುಸ್ತಕದ ಕತೆಯನ್ನು ಸಭೆಯಲ್ಲಿ ಹೇಳಿದ್ದರು. ಇದನ್ನು ತಿರುಚಿ, "ಕಲಬುರ್ಗಿಯವರು ದೇವರ ವಿಗ್ರಹದ ಮೇಲೆ ಉಚ್ಚೆ ಹೊಯ್ದು ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ"' ಎಂದು ಖಾಸಗಿ ವಾಹಿನಿಗಳು ಮತ್ತೆಮತ್ತೆ 'ಬ್ರೇಕಿಂಗ್ ನ್ಯೂಸ್' ಮೂಲಕ ಮಾನ ಹರಾಜು ಹಾಕಿದವು. ಅವರನ್ನು ಸಂದರ್ಶನಕ್ಕೆ ಕರೆದು ಅವಮಾನ ಮಾಡಿದವು. ಮುಖ್ಯವಾಗಿ ರಂಗನಾಥ ಭಾರದ್ವಾಜ ಟಿವಿಯ ಸಂದರ್ಶನದಲ್ಲಿ ವರ್ತಿಸಿದ್ದು ಅತಿರೇಖದ್ದು. ಕಲಬುರ್ಗಿ ಅವರಿಗೆ ಅಲ್ಲಿ ತಮ್ಮ ಅಭಿಪ್ರಾಯ ಹೇಳಲೂ ಅವಕಾಶ ಕೊಡಲಿಲ್ಲ. ವಿಶ್ವೇಶ್ವರ ಭಟ್ಟ ಸಂಪಾದಕರಾಗಿದ್ದ 'ಕನ್ನಡಪ್ರಭ' ಪತ್ರಿಕೆ ಚಿಳ್ಳೆಪುಳ್ಳೆ, ಪೀಚಲು ಬರಹಗಾರರಿಂದ ಕಲಬುರ್ಗಿ ಅವರ ತೇಜೋವಧೆ ಮಾಡಲೆಂದೆ ಕ್ಷುಲ್ಲಕ ಹಾಗೂ ಅಸಂಬದ್ಧ ಬರಹ  ಪ್ರಕಟಿಸುತ್ತ ಬಂತು.  ಕ್ರಮೇಣ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದು ಈ  ಪತ್ರಿಕೆ ಬರಹ ಹಾಗೂ ವಿದ್ಯುನ್ಮಾನ ಮಾಧ್ಯಮಗಳೇ! ಜೊತೆಗೆ ಒಂದೆರಡು ದೈನಿಕಗಳೂ ಹಿಂದುತ್ವ ಪ್ರತಿಪಾದಕ ಓದುಗರನ್ನು ಅಮಲೇರಿಸಿ ಕೆರಳುವಂತೆಯೂ ಮಾಡಿದ್ದವು. ಕಲಬುರ್ಗಿ ಅವರಿಗೆ ಅನೇಕರು ಕೊಲೆ ಬೆದರಿಕೆಯನ್ನೂ ಹಾಕಿದರು.

ಈ ಎಲ್ಲ ವ್ಯವಸ್ಥಿತ ಕಾರ್ಯತಂತ್ರ ಗಮನಿಸಿದ ನಾನು, "ಕಲಬುರ್ಗಿ ಕೊಲೆಗೆ ಸುಪಾರಿ ನೀಡಿದ್ದೇ ವಿಶ್ವೇಶ್ವರ ಭಟ್ಟ ಸಂಪಾದಕನಾಗಿದ್ದ "ಕನ್ನಡಪ್ರಭ"ದ ಪ್ರಚೋದನಾಕಾರಿ ಬರಹಗಳು ಹಾಗೂ ಇತರೆ ಮಾಧ್ಯಮಗಳು" ಎಂಬ ತೀರ್ಮಾನಕ್ಕೆ ಬಂದಿದ್ದೇನೆ.

ಈ `ಟಿಪ್ಪಣಿ ಹಾಕುವಾಗ ಕಲಬುರ್ಗಿ ಕೊಲೆಯಾಗಿ ಹತ್ತು ತಿಂಗಳಾಗುತ್ತಾ ಬಂದಿದೆ. ರಾಜ್ಯ ಸಿಐಡಿ ಶ್ರಮ ಫಲಿಸಿಲ್ಲ. ಕೊಲೆಗಾರರ ಸುಳಿವೂ ಸಿಕ್ಕಿಲ್ಲ. ಯಾವುದೇ ಸುಳಿವೂ ಬಿಟ್ಟುಹೋಗದ ಕೊಲೆಗಾರರು ಚಾಣಾಕ್ಷರೇ ಇರಬೇಕು. ಕಲಬುರ್ಗಿಯಂಥ ದೊಡ್ಡ ವಿದ್ವಾಂಸ ಮಾಧ್ಯಮದ ಚೋದ್ಯಕ್ಕೆ ಬಲಿಯಾದದ್ದು ಇತಿಹಾಸದ ವ್ಯಂಗ್ಯ.
ಲೇಖನ
:ಆರ್ ಜಿ ಹಳ್ಳಿ ನಾಗರಾಜ, ಚಿಂತಕರು, 99005 66020.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ: ಇಬ್ಬರು ಆರೋಪಿಗಳಿಗೆ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿದ ನ್ಯಾಯಾಲಯಕುವೆಂಪು ಕಂಡ ಕ್ರಾಂತಿವೀರ, ಶಿವರುದ್ರಪ್ಪ ಮೆಚ್ಚಿದ ಮಹಾಚೇತನ! ಬಸವಣ್ಣನವರನ್ನು ಅಳೆಯುವ ಅರ್ಹತೆ ಯಾರಿಗಿದೆ?ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ: 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟರಾಷ್ಟ್ರೀಯ ಮತದಾರರ ದಿನಾಚರಣೆ: ಜಿಲ್ಲಾಮಟ್ಟದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜನೆಆರ್.ಆರ್. ನಗರದಲ್ಲಿ ರಾಜಕೀಯ ಬೆಳವಣಿಗೆ; ಮುನಿರತ್ನ ಆಪ್ತರು ಕಾಂಗ್ರೆಸ್ ಸೇರ್ಪಡೆರೇಣುಕಾಸ್ವಾಮಿ ಕೊಲೆ ಕೇಸ್: ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪಟ್ಟಣಗೆರೆ ಶೆಡ್ ಗಾರ್ಡ್, ಪ್ರಾಸಿಕ್ಯೂಷನ್‌ಗೆ ಹಿನ್ನಡೆ!ಕಾಡಾನೆ ಸ್ಥಳಾಂತರಕ್ಕೆ ತೀವ್ರ ವಿರೋಧ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ನಯನಾ ಮೋಟಮ್ಮಏಷ್ಯಾ ಪವರ್ ಇಂಡೆಕ್ಸ್ 2026: 3ನೇ ಸ್ಥಾನ ಉಳಿಸಿಕೊಂಡ ಭಾರತ; ಪ್ರಾದೇಶಿಕ ನಾಯಕತ್ವದಲ್ಲಿ ಮೋದಿಗೆ 2ನೇ ಸ್ಥಾನಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಡಿ: ಡಿಸಿಎಂ ಜಿ. ಪರಮೇಶ್ವರ್ಚೆಕ್ ಬೌನ್ಸ್ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು