Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಏನಿದು ವಾಚಕರ ಪತ್ರ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಚಕರ ಪತ್ರ, ಮೊನ್ನೆ ನಮ್ಮ ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆಯೊಂದಕ್ಕೆ ಹೋದಾಗ ಅಲ್ಲಿ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಕಾಲಿಡಲು ಜಾಗವಿರಲಿಲ್ಲ. ಅಷ್ಟೊಂದು ಸಂಖ್ಯೆಯಲ್ಲಿ ನಾ- ಮುಂದು ತಾ- ಮುಂದು ಎಂದು ಖರೀದಿ ಭರಾಟೆಯಲ್ಲಿ ಅವರಿದ್ದರು.

ಅಲ್ಲೇ ಹುಡುಗರನ್ನು ಯಾಕೆ ಇಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ ಯಾರಿಗಾಗಿ ಕೊಡಲು ಈ ಖರೀದಿ ಎಂದಾಗ ..! ಅದೇ ಅಂಕಲ್  ಇನ್ನೆರಡು ದಿನ ಬಿಟ್ಟು ಕ್ರಿಸ್ ಮಸ್ ಇದೆಯಲ್ಲ, ಹಾಗಾಗಿ ನಾವು  ಫ್ರೆಂಡ್ಸ್ ಹಾಗೂ ನಮ್ಮ ಟೀಚರ್ಸ್ ಗೆ ಗಿಫ್ಟ್  ಕೊಡಲು ಕೊಂಡು ಹೋಗಲು ಬಂದಿದ್ದೇವೆ ಎಂದರು.

ನಾವು ಅವರಿಗೆ ಅವರು ನಮಗೆ ಉಡುಗೊರೆ ವಿನಿಮಯ ಮಿಡಿಕೊಳ್ಳು ಕಾರ್ಯಕ್ರಮವಿದೆ ಎಂದರು. ಹೌದು ಇದು ಒಳ್ಳೆಯ ಬೆಳವಣಿಗೆಯಾದರೂ, ಒಂದಷ್ಟು ದಿನ ಅಥವಾ ವರ್ಷ ನೆನಪಿನಲ್ಲಿ ಇಡುವ ವಸ್ತು ಹೌದಾದರೆ ...

ಈ ಪದ್ಧತಿ  ಅನುಸರಿಸುವ ಶಾಲೆ ಅಥವಾ ಕಾಲೇಜುಗಳಲ್ಲಿ ಇನ್ನೂ ಮುಂದುವರೆದು  ಓದಿದ್ದು ಸದಾ  ನೆನಪಿನಲ್ಲಿ ಉಳಿಯುವ  ಮನೆಯ ಕಪಾಟಿನಲ್ಲಿಟ್ಟುಕೊಳ್ಳಬಹುದಾದ  ಬದುಕನ್ನು ಬದಲಿಸಬಲ್ಲ, ಮಾರ್ಗದರ್ಶಿಯಾಗಬಲ್ಲ ಪುಸ್ತಕಗಳನ್ನು ತೆಗೆದುಕೊಂಡು ಅದನ್ನೇ "ಗ್ರಂಥ ವಿನಿಮಯ" ದಂತಹ ಒಂದು ಸಮಾರಂಭವನ್ನು ಏರ್ಪಡಿಸಿ ನೀಡಿದರೆ ಎಷ್ಟು ಉಪಯುಕ್ತವಾಗುತ್ತದೆ.


ಇದರಿಂದ ಓದಲು ಪ್ರೇರಣೆ ನೀಡಿದಂತಾಗುತ್ತದೆ. ಒಂದು ಪುಸ್ತಕದ ಓದಿನಿಂದ ಕೆಲವರು ತಮ್ಮ ಬದುಕನ್ನೇ ಅಥವಾ ದಿಕ್ಕನ್ನೇ ಬದಲಿಸಿಕೊಂಡ ಉದಾಹರಣೆ ಇರುವಾಗ.. ಇಂತಹ ಉಪಕ್ರಮವನ್ನು ಅನುಸರಿಸಬಾರದೇಕೆ ಎಂದನಿಸಿತು. ಈಗೀಗ ಪುಸ್ತಕಗಳನ್ನು ಓದುವವರ ಸಂಖ್ಯೆಯೇ ವಿರಳವಾಗುತ್ತಿರುವಾಗ ಶಾಲೆಗಳಲ್ಲಿ ಮಕ್ಕಳಿಗೆ ಕಥೆ, ಕಾದಂಬರಿ, ಅನುಭವಕಥನ 

ಹೀಗೆ ಒಟ್ಟಿನಲ್ಲಿ ಮಕ್ಕಳ ನೈತಿಕ ಬೆಳವಣಿಗೆಗೆ ಪೂರಕವಾಗುವಂತಹ ಪುಸ್ತಕಗಳನ್ನು ಓದಲು ಮನೆ, ಪಾಠಶಾಲೆ ಇದರೊಂದಿಗೆ ಸಾರ್ಜನಿಕರು ಮುತುವರ್ಜಿವಹಿಸಿ ಸ್ವಲ್ಪ ಆಸಕ್ತಿ ತೆಗೆದುಕೊಂಡರೆ ಗ್ರಂಥಗಳನ್ನ ಉಡುಗೊರೆಯಾಗಿ ಕೊಡುವ ಆ ಮೂಲಕ ಓದಿಸುವ ಕ್ರಮವಾದರೆ ವಿದ್ಯಾರ್ಥಿಗಳ ಬುದ್ಧಿ, ಜ್ಞಾನಕ್ಕೆ ಇಂಬು ನೀಡಿದಂತಾಗುತ್ತದೆ. ಅವರು ಪಠ್ಯದ ಜೊತೆಗೆ ಇತರ ಕೃತಿಗಳನ್ನು ಓದುವ ಹವ್ಯಾಸ ರೂಡಿಸಿಕೊಂಡಂತಾಗುತ್ತದೆ.
ರುದ್ರಮೂರ್ತಿ ಎಂ. ಜೆ
, ಚಿತ್ರದುರ್ಗ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!