ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಯನ್ಸ್ ಕ್ಲಬ್ ಆಪ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ಮತ್ತು ಕಂಟನಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ "ಬೆಂಗಳೂರು ಬಾಡಿಫೈ ರವರ ವತಿಯಿಂದ ಉಚಿತ ಬಾಡಿಫೈ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್ ಅದ್ಯಕ್ಷರಾದ. ಕೆ. ಎಂ.ಕೃಷ್ಣಮೂರ್ತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಬಾಡಿ ಫೈ ಶಿಬಿರ ಹತ್ತು ದಿನಗಳ ಕಾಲ ಬೆಳಿಗ್ಗೆ ಯಿಂದ ಸಂಜೆಯ ವರೆಗೂ ನಡೆಯುತ್ತದೆ. ಸುತ್ತ ಮುತ್ತಲಿನ ಗ್ರಾಮದ ಜನರು ಇದರ ಪ್ರಯೋಜನ ಪಡೆಯಬಹುದು. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಹೋಗುವ ಬದಲು ನಮ್ಮ ಗ್ರಾಮದಲ್ಲೇ ನಡೆಯುವ ಉಚಿತ ಅರೋಗ್ಯ ಶಿಬಿರದ ಪ್ರಯೋಜನವನ್ನು ಜನಸಾಮಾನ್ಯರು ಪಡೆಯಿರಿ ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅದ್ಯಕ್ಷ ಲಕ್ಷ್ಮಿಕಾಂತ್ (ಅಪ್ಪಿ ) ರವರು ಅದ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ. ಸಿ. ಮಂಜುನಾಥ್, ಶ್ರೀನಿವಾಸ್ ರೆಡ್ಡಿ,ಹಿರಿಯ ರಂಗಭೂಮಿ ಕಲಾವಿದರಾದ ರಬ್ಬನಹಳ್ಳಿ ಕೆಂಪಣ್ಣ, ಲಯನ್ಸ್ ಕ್ಲಬ್ ಖಜಾಂಚಿ ಕೆ. ಆರ್. ಶೇಷರಂಗಯ್ಯ, ಕೆ. ಆರ್ ಚಿಕ್ಕಪಾಪಯ್ಯ, ಮುತ್ತುರಾಜಣ್ಣ, ಬೆಂಗಳೂರು ಬಾಡಿಫೈ ಸಂಸ್ಥೆಯ ಮುಖ್ಯಸ್ಥರು ಮತ್ತು ಮುಖ್ಯ ತರಬೇತುದಾರರಾದ ಶ್ರೀಮತಿ ನಿತ್ಯಾ ಷಣ್ಮುಗಂ ಮತ್ತು ಷಣ್ಮುಗಂ ರವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.



