Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸ್ಟಿಂಗ್ ಆಪರೇಷನ್, ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಾರಾ ಹೆಚ್‌ಡಿಕೆ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಕಾವು ಇನ್ನೂ ತಗ್ಗಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು
, ದಸರಾ ವಿರಾಮದ ಬಳಿಕ ರಾಜಕೀಯ ವಾಗ್ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ.

ಈ ಬೆಳವಣಿಗೆಯ ನಡುವೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಾರಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಅವರು "ಒಂದು ಕಲ್ಲಿಗೆ ಎರಡು ಹಕ್ಕಿ" ಎಂಬಂತೆ ದಾಳಿ ನಡೆಸುತ್ತಿದ್ದಾರಾ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಟಾರ್ಗೆಟ್ 1: ಡಿ.ಕೆ. ಶಿವಕುಮಾರ್;
ಕುಮಾರಸ್ವಾಮಿ ಅವರ ಪ್ರಮುಖ ಗುರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂಬುದು ರಾಜಕೀಯ ವಿಶ್ಲೇಷಕರ ಪ್ರಬಲ ವಾದ. ಡಿ.ಕೆ. ಶಿವಕುಮಾರ್ ರಾಜಕೀಯವಾಗಿ ಮೇಲುಗೈ ಸಾಧಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಹೆಚ್‌ಡಿಕೆ, ಅವರ ವಿರುದ್ಧ ಸರಣಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಇಬ್ಬರ ನಡುವಿನ ರಾಜಕೀಯ ವೈಷಮ್ಯ ಈಗ ವೈಯಕ್ತಿಕ ಹಂತಕ್ಕೂ ತಲುಪಿದೆ.

ಸದ್ಯ ಸ್ಟಿಂಗ್ ಆಪರೇಷನ್ ಅಸ್ತ್ರವನ್ನು ಪ್ರಯೋಗಿಸಿರುವ ಕುಮಾರಸ್ವಾಮಿ, ಇಡೀ ಪ್ರಹಸನದ ಹಿಂದಿನ 'ಸೂತ್ರಧಾರ' ಡಿ.ಕೆ. ಶಿವಕುಮಾರ್ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸಲು ಡಿ.ಕೆ. ಶಿವಕುಮಾರ್ ಈ ರೀತಿಯ ತಂತ್ರ ರೂಪಿಸಿದ್ದಾರೆ ಎಂದು ಕುಮಾರಸ್ವಾಮಿ ವಾದಿಸುತ್ತಿದ್ದು, ಇದಕ್ಕೆ ಪೂರಕವಾದ ಮಾಹಿತಿಗಳಿವೆ ಎಂದೂ ಹೇಳಿಕೊಳ್ಳುತ್ತಿದ್ದಾರೆ.

ಟಾರ್ಗೆಟ್ 2: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಒಳಬೇಗುದಿ;
ಹಿಂದೆಲ್ಲಾ ಹೆಚ್.ಡಿ. ಕುಮಾರಸ್ವಾಮಿ ಅವರ ಮುಖ್ಯ ಟಾರ್ಗೆಟ್ ಸಿದ್ದರಾಮಯ್ಯ ಅವರೇ ಆಗಿದ್ದರು. ಜೆಡಿಎಸ್ ತೊರೆದು ಹೊರನಡೆದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ರಾಜಕೀಯ ಸಮರ ನಿಂತಿರಲಿಲ್ಲ. ಮೈತ್ರಿ ಸರ್ಕಾರ ಪತನದ ಸಂದರ್ಭದಲ್ಲೂ ಹೆಚ್‌ಡಿಕೆ ನೇರ ವಾಗ್ದಾಳಿ ನಡೆಸಿದ್ದು ಸಿದ್ದರಾಮಯ್ಯ ಮೇಲೆಯೇ.

ಆದರೆ, ಇದೀಗ ದಿಢೀರ್ ಎಂಬಂತೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಧಿಕಾರ ಹಸ್ತಾಂತರ ಹಾಗೂ ಆಂತರಿಕ ರಾಜಕಾರಣದ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತಿನ ಬೆನ್ನಲ್ಲೇ, ಕುಮಾರಸ್ವಾಮಿ ಸಿದ್ದರಾಮಯ್ಯರವರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ವಿರುದ್ಧ ಎತ್ತಿಕಟ್ಟುವ ಅಥವಾ ಕಾಂಗ್ರೆಸ್ ಪಕ್ಷದೊಳಗಿನ ಬಿರುಕನ್ನು ಮತ್ತಷ್ಟು ಅಗಲಗೊಳಿಸುವ ರಾಜಕೀಯ ತಂತ್ರವನ್ನು ಹೆಣೆಯಲಾಗುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಎಂದಿಗೂ ಸಿದ್ದರಾಮಯ್ಯರ ಪರ ಧ್ವನಿ ಎತ್ತದ ಕುಮಾರಸ್ವಾಮಿ ಈಗ ಅರೆದು ಕುಡಿದವರಂತೆ ಅವರ ಪರವಾಗಿ ಮಾತನಾಡುತ್ತಿರುವುದರ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರವೇ ಇದೆ ಎನ್ನಲಾಗುತ್ತಿದೆ.

ಒಂದು ಕಲ್ಲಿಗೆ ಎರಡು ಹಕ್ಕಿ:
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರ ಕುರಿತು ಕುಮಾರಸ್ವಾಮಿ ಏಕಕಾಲದಲ್ಲಿ ಭಿನ್ನ ನಿಲುವುಗಳನ್ನು ತಾಳುತ್ತಿರುವುದು 'ಒಂದು ಕಲ್ಲಿಗೆ ಎರಡು ಹಕ್ಕಿ' ಹೊಡೆಯುವ ತಂತ್ರ ಎಂದೇ ಬಣ್ಣಿಸಲಾಗುತ್ತಿದೆ. ಸ್ಟಿಂಗ್ ಆಪರೇಷನ್ ವಿಚಾರವನ್ನು ಸದಾ ಜೀವಂತವಾಗಿಟ್ಟುಕೊಳ್ಳುವುದು ಕುಮಾರಸ್ವಾಮಿ ಉದ್ದೇಶವಾಗಿದ್ದು, ಇದರ ಮೂಲಕ ಸಿದ್ದರಾಮಯ್ಯ ಅವರ ಹೆಸರು ಮುನ್ನೆಲೆಯಲ್ಲಿರುವಂತೆ ನೋಡಿಕೊಳ್ಳುತ್ತಲೇ, ಮತ್ತೊಂದೆಡೆ ಸ್ಟಿಂಗ್ ಹಿಂದೆ ಡಿ.ಕೆ. ಶಿವಕುಮಾರ್ ಇದ್ದಾರೆ ಎಂಬ ಸಂದೇಶವನ್ನು ಬಲವಾಗಿ ಬಿತ್ತುತ್ತಿದ್ದಾರೆ. ಒಟ್ಟಿನಲ್ಲಿ, ಈ ಸ್ಟಿಂಗ್ ರಾಜಕೀಯದ ಮೂಲಕ ಮೈತ್ರಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಕಲಹವನ್ನು ಮತ್ತಷ್ಟು ಹೆಚ್ಚಿಸಲು ರಂಗು ರಂಗಿನ ಕಸರತ್ತು ನಡೆಸುತ್ತಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಲಾವಿದರ ಸೇವೆಗೆ ಪ್ರಿಂಟ್ ಬಿನಾಲೆ ಇಂಡಿಯಾ-2026 ಗೌರವ ಬಸವರಾಜಾಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿಡಿ.ಕೆ. ಶಿವಕುಮಾರ್‌ಮೇಲೆ 'ಮೆಟಾ ಎಐ ಗ್ಲಾಸ್‌' ಬಳಸಿ ಸ್ಟಿಂಗ್‌ಆಪರೇಷನ್‌ಯತ್ನ!ಸ್ಟಿಂಗ್ ಆಪರೇಷನ್, ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಾರಾ ಹೆಚ್‌ಡಿಕೆ?ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ!"ನನ್ನ ಮೇಲೆಯೇ ಅನುಮಾನ ಬರುವಂತೆ ತನಿಖೆ ನಡೀತಿದೆ": ಹೆಚ್‌.ಡಿ. ಕುಮಾರಸ್ವಾಮಿ!ಮಾತೃಭಾಷೆ 'ಕನ್ನಡ' ಎಂದಿದ್ದಕ್ಕೆ ಉದ್ಯೋಗ ನಿರಾಕರಣೆ – ಕಂಪನಿ ವಿರುದ್ಧ ಕನ್ನಡಿಗರ ಆಕ್ರೋಶ!ಏಷ್ಯನ್ ಪ್ಯಾರಾ ಗೇಮ್ಸ್ 2026: 114 ಪದಕಗಳೊಂದಿಗೆ ಜಪಾನ್‌ನಲ್ಲಿ ಭವ್ಯ ಇತಿಹಾಸ ಬರೆದ ಭಾರತ!  ಭಾರತ vs ನ್ಯೂಜಿಲೆಂಡ್ 2ನೇ ಟಿ20: ಭಾರತಕ್ಕೆ ರೋಚಕ ಗೆಲುವು!  ಭೀಕರ ಜಿಲೆಟಿನ್ ಸ್ಫೋಟ: ಶಿಕ್ಷಕಿ ಸೇರಿ ಐವರು ದುರ್ಮರಣ, ಎರಡು ವಾಹನಗಳು ಭಸ್ಮನವೆಂಬರ್ 1ರ 'ಇಂಡಿಯಾ' ಒಕ್ಕೂಟದ ರ‍್ಯಾಲಿ ಮುಂದೂಡಿ: ರಾಹುಲ್ ಗಾಂಧಿಗೆ ಸಿಟಿಐ ಮನವಿ