i
ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶರಣರು ಮತ್ತು ಮಹಿಳೆಯರೊಂದಿಗಿನ ವಿಡಿಯೋಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿಗಳ ಪಲ್ಲಂಗ ಪಂಚಾಯಿತಿ ನೋಡಿದ ರಾಜ್ಯದ ಜನತೆಗೆ ಈಗ ಧಾರ್ಮಿಕ ಗುರುಪೀಠದ ಮಾಠಾಧೀಶೆಯೊಬ್ಬಳ ಪಲ್ಲಂಗ ಪಂಚಾಯಿತಿ ನೋಡುವ ಭಾಗ್ಯ ದೊರಕಿದೆ.
ವಿಜಯಪುರ ಜಿಲ್ಲೆಯ ಧಾರ್ಮಿಕ ಗುರುಪೀಠದ ಮಠಾಧೀಶೆ ಮಹಿಳೆಯೊಬ್ಬಳು ಮಾಜಿ ತಾಲೂಕು ಪಂಚಾಯಿತಿ ಸದಸ್ಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಅಶ್ಲೀಲ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್ ಆಗಿದ್ದು ಇದು ಚರ್ಚೆಗೆ ಗ್ರಾಸವಾಗಿದೆ.
ಶರಣರು, ಸ್ವಾಮೀಜಿಗಳು ಮತ್ತು ಮಠಾಧೀಶೆ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಸಮಾಜಕ್ಕೆ ಮುಜುಗರವಾಗಿದೆ. ಹಾಲಿ ವಿಷಯ ಏನೆಂದರೆ ಧಾರ್ಮಿಕ ಗುರುಪೀಠದ ಪೀಠಾಧೀಶೆ ಮಹಿಳೆಯೊಬ್ಬಳು ರಾಜಕಾರಣಿಯೊಂದಿಗೆ ಲೈಂಗಿಕ ಕ್ರಿಯೆಯ ಸರಸಸಲ್ಲಾಪದಲ್ಲಿ ತೊಡಗಿರುವುದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಲೈಂಗಿಕ ಕ್ರಿಯೆಯ ಅಶ್ಲೀಲ ವಿಡಿಯೋ ಬಹಿರಂಗವಾಗುತ್ತಿದ್ದ ಮಹಿಳಾ ಮಠಾಧೀಶೆಯ ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಮಾಜಿ ಗ್ರಾಪಂ ಸದಸ್ಯ ಸೇರಿ ಇಬ್ಬರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು ಯಾರ ಸಂಪರ್ಕಕ್ಕೂ ಇಬ್ಬರು ಸಿಗುತ್ತಿಲ್ಲ ಎನ್ನಲಾಗಿದೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.