i
ಚಿತ್ರದುರ್ಗದಲ್ಲಿ ಮೋಡಮುಚ್ಚಿದ ವಾತಾವರಣ, ಜಿಟಿಜಿಟಿ ಮಳೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಇಡೀ ದಿನ ಮೋಡಮುಚ್ಚಿದ ವಾತಾವರಣ ಕಂಡು ಬಂದಿತಲ್ಲದೆ ಸಂಜೆ 4 ಗಂಟೆ ನಂತರ ಜಿಟಿಜಿಟಿ ಮಳೆ ಹಿಡಿದುಕೊಂಡಿದೆ.
ಬೆಳಿಗ್ಗೆಯಿಂದಲೇ ಮಳೆ ಬೀಳುವ ಸಂಭವ ಕಂಡು ಬಂದಿತ್ತಾದರೂ ಅಲ್ಲಲ್ಲಿ ಗಾಳಿ ಹನಿ ಮಾತ್ರ ಬೀಳುತ್ತಿತ್ತು. ಆದರೆ ಸಂಜೆ ವೇಳೆಗೆ ಗಟ್ಟಿ ಮೋಡವಾಗಿ ಜೋರಾಗಿ ಜಿಟಿಜಿಟಿ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ಕೆಲ ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇದೆ.