i
ಕಾರು, ಬಸ್ ಇತರೆ ವಾಹನಗಳ ಆಕರ್ಷಕ ನೋಂದಣಿ ಸಂಖ್ಯೆಗಳ ಹರಾಜು, ಲಕ್ಷಾಂತರ ರೂ.ಸಂಗ್ರಹ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿ, ಶಾಂತಿನಗರ ಬೆಂಗಳೂರಿನಲ್ಲಿ ನವೆಂಬರ್ 2 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಎ.51. /ಎಮ್ಯು ಮುಂಗಡ ನೋಂದಣಿ ಶ್ರೇಣಿ ಆರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ನಡೆಸಲಾಯಿತು.
ಈ ಹರಾಜು ಪ್ರಕ್ರಿಯೆಯಲ್ಲಿ ಇಟ್ಟು 22 ನೋಂದಣಿ ಸಂಖ್ಯೆಗಳಿಂದ ಸರ್ಕಾರಕ್ಕೆ ಒಟ್ಟು ರೂ. 27,45,000/- ರಾಜಸ್ವ ಸಂಗ್ರಹಣೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.