i
ವಾಣಿ ವಿಲಾಸ ಸಾಗರ ಡ್ಯಾಂ ಕೋಡಿ ಬಿದ್ದು ಇಂದಿಗೆ 2 ತಿಂಗಳು, ಇಂದಿನ ನೀರಿನ ಮಟ್ಟ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ರೈತರ ಜೀವನಾಡಿ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಸಮೀಪದ ವಾಣಿ ವಿಲಾಸ ಸಾಗರ ಕೋಡಿ ಬಿದ್ದು ಇಂದಿಗೆ 2 ತಿಂಗಳಾಗಿದೆ. ಕೋಡಿ ಬಿದ್ದ ದಿನದಿಂದ ಇಲ್ಲಿಯ ತನಕ ನಿರಂತರವಾಗಿ ಎರಡು ತಿಂಗಳ ಕಾಲ ಒಳಹರಿವು ಬರುತ್ತಿರುವುದು ದಾಖಲೆಯಾಗಿದೆ. 1933ರಲ್ಲಿ ಒಮ್ಮೆ ಕೋಡಿ ಹರಿದಿದ್ದರೂ ಇಷ್ಟು ದೀರ್ಘಾವಧಿಗೆ ಕೋಡಿ ಬಿದ್ದ ನಂತರ ಹರಿದಿರಲಿಲ್ಲ ಎನ್ನವ ಮಾಹಿತಿ ಲಭ್ಯವಾಗುತ್ತಿದೆ.
ಈ ಎರಡು ತಿಂಗಳ ಅವಧಿಯಲ್ಲಿ 14 ಸಾವಿರ ಕ್ಯೂಸೆಕ್ ನೀರಿಗೂ ಅಧಿಕ ನೀರಿನ ಒಳಹರಿವು ಎರಡು ಇದ್ದು ಇದು ಒಂದು ಇತಿಹಾಸ ಅಲ್ಲವೇ ಆಗಿದೆ. ಅಲ್ಲದೆ ನೀರಾವರಿ ತಜ್ಞರ ಅಂದಾಜಿನ ಪ್ರಕಾರ ಕಳೆದ ಎರಡು ತಿಂಗಳಿಂದ ಸುಮಾರು 275000 ಲಕ್ಷ ಕ್ಯೂಸೆಕ್ ನೀರು ಡ್ಯಾಂನಿಂದ ಹೊರ ಹೋಗಿದೆ. ಅಂದರೆ ಹಿರಿಯೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳಿಗೆ ಐದು ವರ್ಷಗಳ ಕಾಲ ಕುಡಿಯುವ ನೀರು ನೀಡಬಹುದಾಗಿತ್ತು ಎನ್ನಲಾಗಿದೆ. ಇದರ ಜೊತೆಯಲ್ಲಿ ಒಂದು ದಿನಕ್ಕೆ ಡ್ಯಾಂನಿಂದ ಆವಿ ಆಗುವ ನೀರು 159 ಕ್ಯೂಸೆಕ್ ಆಗಿದೆ.
ಬುಧವಾರ ಬೆಳಿಗ್ಗೆ 8 ಗಂಟೆ ವೇಳೆಗೆ 2278 ಕ್ಯೂಸೆಕ್ ನೀರಿನ ಒಳ ಹರಿವು ಇದ್ದು ಡ್ಯಾಂ ಭರ್ತಿಯಾಗಿರುವುದರಿಂದ ಕೋಡಿ ಮೂಲಕ 3577 ಕ್ಯೂಸೆಕ್ ನೀರು ಹರಿದು ಹೊರ ಹೋಗುತ್ತಿದೆ. ಇಂದಿನ ನೀರಿನ ಮಟ್ಟ 132 ಅಡಿಗೆ ಇಳಿಕೆಯಾಗಿದೆ.
V.V.Sagar water details:
As on 02.11.2022 @ 8.00AM
1)Dam FRL level — 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Inflow obtained – 2278 cusecs
5) Outflow — 3577
6)Evaporation — 146cusecs
7) Drinking — 13 cusecs
8)Dam dead storage level-60.00ft(2070.00ft)
9)Dam dead storage capacity -1.87 TMC
10)Present water storage level –132.00 ft
11) Live storage at FRL- 28.552 TMC
12)Gross storage at FRL– 1.87+28.552=30.422 TMC
Details as on 02.11.2021
1)Water storage level –115.05
2)water gross storage — 18.923 TMC
3)water live storage- 17.053 TMC