i
ಶಾಸಕ ತಿಪ್ಪಾರೆಡ್ಡಿಗೆ ಯುವತಿಯಿಂದ ಹನಿಟ್ರ್ಯಾಪ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಯುವತಿಯೊಬ್ಬಳು ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡುವ ಮೂಲಕ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳುವ ಯತ್ನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕಳೆದ ಎರಡು ದಿನಗಳಿಂದೆ ಶಾಸಕರು ತಮ್ಮ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸುವ ಸಂದರ್ಭದಲ್ಲಿ ಅಪರಿಚತ ಯುತಿಯೊಬ್ಬಳು ನಗ್ನವಾಗಿದ್ದುಕೊಂಡು ವಿಡಿಯೋ ಕಾಲ್ ಮಾಡಿದ್ದು ಎಚ್ಚೆತ್ತುಕೊಂಡು ಶಾಸಕ ತಿಪ್ಪಾರೆಡ್ಡಿ ಅವರು ನಗ್ನ ಯುವತಿ ನೋಡಿದ ಕೂಡಲೇ ವಿಡಿಯೋ ಕಾಲ್ ಕಡಿತ ಮಾಡಿದ್ದಾರೆ. ಅಪರಿತರು ಶಾಸಕರನ್ನ ಹನಿಟ್ರ್ಯಾಪ್ ಗೆ ಬೀಳಿಸುವ ಯತ್ನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ನಗ್ನವಾಗಿ ವಿಡಿಯೋ ಕಾಲ್ ಮಾಡಿದ ಯುವತಿ ಅಥವಾ ಹನಿಟ್ರ್ಯಾಪ್ ಗ್ಯಾಂಗ್ ಪತ್ತೆಗೆ ಬಲೆ ಬೀಸಿದ್ದಾರೆ.