i
ಮನೆಯಲ್ಲಿ ಯಾರೂ ಇಲ್ಲ ಬೇಗ ಬಾ ಎಂದು ಯುವತಿ ಮೆಸೇಜ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಯಲ್ಲಿ ಯಾರೂ ಇಲ್ಲ ಬೇಗ ಬಾ ಎಂದು ಯುವಕನೊಬ್ಬನಿಗೆ ಮೆಸೇಜ್ ಮಾಡಿ ಹನಿಟ್ರ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ನಡೆದಿದೆ.
ಯುವತಿ ಮಾಡಿರುವ ಮೆಸೇಜ್ ನಂಬಿ ಬಂದ ದಿಲೀಪ್ ಕುಮಾರ್ ಎಂಬ ಯುವಕ ಪ್ರಿಯಾ ಎಂಬ ಹೆಸರಿನ ಯುವತಿಯ ಗಾಳಕ್ಕೆ ಬಿದ್ದು ಹನಿಟ್ರ್ಯಾಪ್ ಗೆ ಒಳಗಾಗಿ ಮೋಸ ಹೋಗಿದ್ದಾನೆ.
ಮೆಸೇಜ್ ನೋಡಿ ಯುವತಿ ಭೇಟಿಯಾಗಲು ಹೋದವನ ವಿಡಿಯೋ ಚಿತ್ರೀಕರಿಸಿದ ಯುವತಿ ಮತ್ತು ಆಕೆ ತಂಡ ಯುವಕನಿಂದ ಸುಲಿಗೆ ಮಾಡಿದ್ದಾರೆ.
ಘಟನೆ ವಿವರಃ ಕಳೆದ ಅಕ್ಟೋಬರ್ 27ರಂದು ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿದ್ದ ಪ್ರಿಯಾ ಎನ್ನುವ ಹೆಸರಿನ ಯುವತಿ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿ ಮನೆಗೆ ಕರೆಸಿಕೊಂಡಿದ್ದಳು. ಇದಕ್ಕೆ ಒಪ್ಪಿ ಮನೆಗೆ ದಿಲೀಪ್ ಹೋಗಿದ್ದ. ದಿಲೀಪ್ ಮನೆ ಒಳಗೆ ಎಂಟ್ರಿಯಾಗುತ್ತಿದ್ದಂತೆ ನಾಲ್ವರು ಯುವಕರು ಮುಂದೆ ಬಂದು ಚಾಕು ತೋರಿಸಿ ಹಣ ಮೊಬೈಲ್ ಕೊಡುವಂತೆ ಬೆದರಿಸಿ ಸುಲಿಗೆ ಮಾಡಿದ್ದರು. ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ದಿಲೀಪ್ ಕುಮಾರ್ ತನ್ನ ಬಳಿ ಇದ್ದ 26 ಸಾವಿರ ನಗದು, ಐಫೋನ್, ಕಾರ್ ಕೀ ನೀಡಿ ಮೋಸ ಹೋಗಿದ್ದನು.
ಇಷ್ಟಾದ ಮೇಲೂ ಹನಿಟ್ರ್ಯಾಪ್ ಮಾಡಿದ ಪಾತಕಿಗಳ ತಂಡ 25 ಸಾವಿರ ರೂ ಹಣವನ್ನು ದಲೀಪ್ ಸಹೋದರನಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಿನಗೆ ಕಾರ್ ಬೇಕೆದಂರೆ ಮತ್ತೆ 60 ಸಾವಿರ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಹನಿಟ್ರ್ಯಾಪ್ ತಂಡಕ್ಕೆ ಹೆದರಿದ ದಿಲೀಪ್ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದು ಪೊಲೀಸರು ಹನಿ ಟ್ರ್ಯಾಪ್ ತಂಡದ ಆರೋಪಿಗಳಾದ ಯುವತಿ ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.