i
ನವೆಂಬರ್ 30 ರವರೆಗೆ ವಿದ್ಯುತ್ ಕಾಮಗಾರಿ: ಸಹಕರಿಸಲು ಮನವಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೃಹತ್ ಕಾಮಗಾರಿ ವತಿಯಿಂದ ಹಿರೇಮಲ್ಲನಹೊಳೆಯಿಂದ ಚಿತ್ರದುರ್ಗ ಸ್ವೀಕರಣಾ ಕೇಂದ್ರಕ್ಕೆ ಹಾಲಿ ಇರುವ 66 ಕೆ.ವಿ ಮಾರ್ಗದ ಕಾರಿಡಾರ್ನಲ್ಲಿಯೋ 220 ಕೆ.ವಿ. ಮಾರ್ಗವನ್ನು ಬಹು ಮಾರ್ಗ ಮತ್ತು ಬಹು ವೋಲ್ಟೇಜ್ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ.
ಮಾಡನಾಯಕನಹಳ್ಳಿ ಮತ್ತು ತುರವನೂರು 66/11 ಕೆ.ವಿ. ವಿ.ವಿ.ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡುವ ಐ.ಪಿ ಮಾರ್ಗಗಳಿಗೆ ನವೆಂಬರ್ 30 ರವರೆಗೆ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಹಾಗೂ ರಾತ್ರಿ 10 ರಿಂದ 2 ಗಂಟೆವರೆಗೆ ಅಥವಾ ರಾತ್ರಿ 2 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ.
ರೈತರು ಮತ್ತು ಗ್ರಾಹಕರು ಕಾಮಗಾರಿ ಪೂರ್ಣಗೊಳ್ಳವರೆಗೆ ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.