i
ಸರ್ಕಾರಿ ಕೈಗಾರಿಕಾ ಮತ್ತು ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಯುವಕ / ಯುವತಿಯರಿಗೆ ಚಾಲನಾ ತರಬೇತಿಯೋಜನೆಯಡಿ 4 ವಾರಗಳ ಲಘುವಾಹನ ಚಾಲನಾ ತರಬೇತಿ (LMV CAR) ನೀಡಲಾಗುತ್ತಿದೆ.
ಚಾಲನ ತರಬೇತಿ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ / ತತ್ಸಮನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು 18ರಿಂದ 40 ವರ್ಷಗಳ ವಯೋಮಿತಿ ಹೊಂದಿರಬೇಕು. ತರಬೇತಿ ಅವಧಿ ಪ್ರತಿ ದಿನ 5 ಕಿ.ಮೀ ರಂತೆ 20 ಕರ್ತವ್ಯದ ದಿನಗಳ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳ ಹುಟ್ಟಿದ ದಿನಾಂಕ ನಿಗದಿಪಡಿಸಿಕೊಳ್ಳುವ ಸಲುವಾಗಿ ಎಸ್.ಎಸ್.ಎಲ್.ಸಿ / ಟಿ.ಸಿ / ಮೂಲ ಪ್ರತಿ ಅಗತ್ಯವಾಗಿ ಸಲ್ಲಿಸುವುದು. ಬೆಂಗಳೂರು ನಗರದಲ್ಲಿ ವಾಸಿಯಾಗಿರುವ ಬಗ್ಗೆ ವಾಸ ಸ್ಥಳ ದೃಢೀಕರಣಕ್ಕೆ ಆಧಾರ್ ಕಾರ್ಡು / ಚುನಾವಣಾ ಗುರುತಿನ ಚೀಟಿ / ಪಡಿತರ ಚೀಟಿ ಅಗತ್ಯವಾಗಿ ಹಾಜರುಪಡಿಸಬೇಕು. ತರಬೇತಿ ಶುಲ್ಕ ರೂ. 1000/- ನಿಗದಿಪಡಿಸಲಾಗಿದ್ದು, ತರಬೇತಿ ನಂತರ ಆರ್.ಟಿ.ಒ ನಿಂದ ಡಿ.ಎಲ್ ಪಡೆಯಲು ವಿಫಲವಾದಲ್ಲಿ ತರಬೇತಿ ಶುಲ್ಖ ಹಿಂದಿರುಗಿಸಲಾಗುವುದಿಲ್ಲ. ಎಲ್.ಎಲ್.ಆರ್ ಮತ್ತು ಡಿ.ಎಲ್ನ (ಆರ್.ಟಿ ಒ ಶುಲ್ಕವನ್ನು ಪ್ರತ್ಯೇಕವಾಗಿ ಅಭ್ಯರ್ಥಿಗಳೇ ಭರಿಸುವುದು. ಅರ್ಜಿ ಶುಲ್ಕ ರೂ. 50/- ಇದ್ದು, ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ನಮೂನೆ ಹಾಗೂ ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23379417, ಮೊಬೈಲ್ ದೂರವಾಣಿ ಸಂಖ್ಯೆ 9739578549 ನ್ನು ಸಂಪರ್ಕಿಸುವಂತೆ ಪ್ರಾಂಶುಪಾಲರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ತುಮಕೂರು ರಸ್ತೆ, ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.