i
ಆಯ್ಕೆ ಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ದಾಖಲಾತಿಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು….
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಆರಿಗೆ ನಿಗಮದಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಬಾಕಿ ಇದ್ದ ಕಛೇರಿ ಸಹಾಯಕ (ತೋಟಗಾರಿಕೆ– Iಗಿ) ಪರಿಶಿಷ್ಟ ಜಾತಿ ಹಿಂಬಾಕಿ ಹುದ್ದೆಯ ಸಂಭವನೀಯ ಆಯ್ಕೆಪಟ್ಟಿ ಅಂಕಗಳ ವಿವರಗಳನ್ನು ನವೆಂಬರ್ 30, 2022 ರಂದು ನಿಗಮದ ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್–ಸೈಟ್ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಆಯ್ಕೆ ಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಆಯ್ಕೆಪಟ್ಟಿ ಪ್ರಕಟಿಸಿದ 15 ದಿನಗಳೊಳಗೆ ಪೂರಕ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (ನೇಮಕ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಕೆ.ಹೆಚ್.ರೋಡ್, ಶಾಂತಿನಗರ, ಬೆಂಗಳೂರು–27 ಇವರಿಗೆ ಸಲ್ಲಿಸುವಂತೆ ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.