i
ಪೊಲೀಸರು ದಂಡ ಹಾಕುವುದನ್ನು ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದಲ್ಲಿ ಆಟೋ ಚಾಲಕರಿಗೆ ಕಾನೂನು ಬಾಹಿರವಾಗಿ ಪೊಲೀಸರು ದಂಡದವನ್ನು ಹಾಕುತ್ತಿರುವುದನ್ನು ವಿರೋಧಿಸಿ ಡಿಸಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದರು.
ಸಾಕಷ್ಟು ನಿರುದ್ಯೋಗಿಗಳು, ಪದವೀಧರರು ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ವಾಹನ ಚಾಲನೆ ಬಿಟ್ಟರೆ ಬೇರೆಯಾವುದೆ ಮಾರ್ಗದಿಂದ ಆದಾಯ ಬರುತ್ತಿಲ್ಲ, ಆಟೋ ಚಾಲಕರು ಒಂದು ದಿನಕ್ಕೆ 350 ರಿಂದ 500 ರೂ ವರೆಗೆ ದುಡಿಮೆ ಮಾಡಿ ಇದರಲ್ಲಿಯೇ ತಮ್ಮ ಸಂಸಾರ ಸಾಕುತ್ತಿದ್ದಾರೆ. ಇತಂಹ ವ್ಯವಸ್ಥೆಯಲ್ಲಿ ಆರ್.ಟಿ.ಓ ಅಧಿಕಾರಿಗಳು ಮತ್ತು ಟ್ರಾಫಿಕ್ ಇಲಾಖೆಯವರು ಆಟೋ ಚಾಲಕರಿಗೆ 5000 ರಿಂದ 15000 ಸಾವಿರದ ವರೆಗೆ ದಂಡ ಹಾಕುತ್ತಿದ್ದಾರೆ. ಆದರೆ ಈ ದಂಡ ಹಾಕುತ್ತಿರುವುದಕ್ಕೆ ಬಿಲ್ ಸಹ ನೀಡುತ್ತಿಲ್ಲ. ಚಿತ್ರದುರ್ಗದಲ್ಲಿ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಚಾಲಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಇರುವುದಿಲ್ಲ ಹಾಗೂ ಆಟೋ ಚಾಲಕರುಗಳು ಆಟೋದ ಎಲ್ಲಾ ದಾಖಲೆಗಳನ್ನು ತೋರಿಸಿದ್ದರೂ ಸಹ ಯಾವುದಾದರೊಂದು ಸಬೂಬು ಹೇಳಿ 5000 ರೂ.ಗಳ ವರೆಗೆ ದಂಡ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಆಟೋ ಚಾಲಕರಿಗೆ ದಂಡದ ಮೊತ್ತವನ್ನು ಕಡಿಮೆಗೊಳಿಸಿ, ಸರಿಯಾದ ದಾಖಲೆಗಳನ್ನು ಹಾಜರು ಪಡಿಸಿರುವವರಿಗೆ ದಂಡ ಹಾಕದೆಬಾರದರು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.