i
ಹಿರಿಯೂರಿನಲ್ಲಿ ಮೃತಪಟ್ಟ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಾ ಭಾಷಾ ಎಂಬ 28 ರಿಂದ 30 ವರ್ಷದ ವ್ಯಕ್ತಿಯು ಮೃತಪಟ್ಟಿರುವ ಪ್ರಕರಣ ಡಿಸೆಂಬರ್ 26 ರಂದು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ಅನಾಮಧೇಯ ವ್ಯಕ್ತಿಯ ಚಹರೆ ಇಂತಿದೆ. ಸುಮಾರು 5.5 ಅಡಿ ಎತ್ತರ, ತೆಲುಗು ಮತ್ತು ಹಿಂದಿ ಮಾತನಾಡುತ್ತಾನೆ. ಕೋಲು ಮುಖ, ತೆಳ್ಳನೆಯ ಶರೀರ, ಎಣ್ಣೆಗೆಂಪು ಬಣ್ಣ, ಪಾಚಿ ಕಲರ್ ತುಂಬು ತೋಳಿನ ಶರ್ಟ್, ಬೂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಹಿರಿಯೂರು ನಗರ ಪೊಲೀಸ್ ಠಾಣೆ-08193-263444, ಡಿವೈಎಸ್ಪಿ ಕಚೇರಿ-08193-263499, ಜಿಲ್ಲಾ ನಿಸ್ತಂತು ಕೇಂದ್ರ- 08194-222782, ಗೆ ಸಂಪರ್ಕಿಸಬೇಕು ಎಂದು ಹಿರಿಯೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.