i
ಜ.27 ರಂದು ಜೆಎಂಐಟಿ ಗ್ರಾಜುಯೇಷನ್ ಡೇ ಸಮಾರಂಭ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದ ೨೦೨೧-೨೨ರ ಪದವೀಧರರಿಗೆ ಗ್ರಾಜ್ಯೂಯೇಷನ್ ಡೇ ಸಮಾರಂಭವನ್ನು ಮುರುಘಾ ಮಠದ ಅನುಭವ ಮಂಟಪದಲ್ಲಿ ದಿನಾಂಕ:೨೭.೦೧.೨೦೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಇಸ್ರೋದ ಯು.ಆರ್ ರಾವ್ ಸ್ಯಾಟಲೈಟ್ ಸೆಂಟರ್ನ ಗ್ರೂಪ್ ಡೈರೆಕ್ಟರ್ ರಮೇಶ್ ವಿ ನಾಯ್ಡು ಆಗಮಿಸಲಿದ್ದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿ ವಿ ಎಸ್ ವಸ್ತ್ರದ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಭರತ್ ಪಿ ಬಿ, ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.