i
ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಿದ್ದೆಗೆಡಿಸಿದ ಗುಪ್ತದಳದ ವರದಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸೀಟು ಗೆಲ್ಲುವ ಸಾಧ್ಯತೆ ಇದೆ ಎನ್ನುವ ಗುಪ್ತದಳದ ವರದಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಪಕ್ಷಗಳ ನಿದ್ದೆಗೆಡಿಸಿದ್ದರೆ ತುಸು ಜೆಡಿಎಸ್ ಪ್ರಯತ್ನ ಮಾಡಿದರೆ ಇನ್ನೂ ಹೆಚ್ಚಿನ ಸೀಟು ಪಡೆಯಲು ಸಾಧ್ಯ ಎನ್ನವಂತಿದೆ ಗುಪ್ತದಳದ ವರದಿ.
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60, ಕಾಂಗ್ರೆಸ್ 58 ಹಾಗೂ ಜೆಡಿಎಸ್ 30 ಸ್ಥಾನ ಗೆಲ್ಲುವುದು ನೂರಷ್ಟು ಖಚಿತ ಎನ್ನುವ ಪ್ರಾರ್ಥಮಿಕ ವರದಿ ಆಡಳಿತ ರೂಢ ಬಿಜೆಪಿ ಸರ್ಕಾರಕ್ಕೆ ಲಭ್ಯವಾಗಿದೆ.
ಗುಪ್ತದಳದ ವರದಿಯಿಂದ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಕೆಂಗ್ಗೆಟ್ಟಿವೆ. 148 ಸೀಟುಗಳನ್ನು ಮೂರು ಪಕ್ಷಗಳು ಹಂಚಿಕೊಂಡರೆ ಉಳಿದ 76 ಕ್ಷೇತ್ರಗಳ ಯಾರು ಎಷ್ಟು ಸೀಟು ಗೆದ್ದು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್ ಪ್ರಜಾಧ್ವನಿ, ಜೆಡಿಎಸ್ ಪಂಚರತ್ನ ರಥ ಯಾತ್ರೆಗಳ ಅನಂತರ ಕೆಲವು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಬದಲಾವಣೆ ಹಾಗೂ ಸ್ಥಳೀಯ ಹಂತದ ಪರಿಸ್ಥಿತಿ ಬದಲಾಗಿದೆ ಎನ್ನಲಾಗಿದೆ. ನವೆಂಬರ್ನಿಂದ ಜ. 25ರ ವರೆಗಿನ ಗುಪ್ತಚರ ಮಾಹಿತಿ ವರದಿ ರಾಷ್ಟ್ರೀಯ ಪಕ್ಷಗಳಲ್ಲಿ ಆತಂಕ ಸೃಷ್ಠಿಸಿದೆ.