i
ಸರ್ಕಾರಿ ನೌಕರರು ವಾರದಲ್ಲಿ 5 ದಿನ ಸೇವೆ, 7ನೇ ವೇತನ ಆಯೋಗಕ್ಕೆ ಮನವಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಸರ್ಕಾರಿ ಕೆಲಸ, ವಾರಾಂತ್ಯ ಎರಡು ದಿನ ರಜೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ಪದಾಧಿಕಾರಿಗಳ ನಿಯೋಗ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದೆ.
ವಾರಕ್ಕೆ ಐದು ದಿನ ಕೆಲಸ ಪದ್ಧತಿ ಜಾರಿಗೆ ತಂದು ಕೆಲಸದ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಬದಲಿಸಬೇಕು. ದೈನಂದಿನ ಕರ್ತವ್ಯದ ಅವಧಿ ಹೆಚ್ಚಳ ಮಾಡಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನೀಡುವ ಪದ್ಧತಿ ಜಾರಿ ಮಾಡುವಂತೆ ಆಯೋಗಕ್ಕೆ ನಿಯೋಗ ಮನವಿ ಮಾಡಿದೆ.
ನೌಕರರಲ್ಲಿ ದಕ್ಷತೆ, ನೈಪುಣ್ಯತೆ, ಕ್ರಿಯಾಶೀಲತೆ ಹೆಚ್ಚಳಕ್ಕೆ ತರಬೇತಿ ನೀಡಬೇಕು. ಮೂಲವೇತನಕ್ಕೆ ಹಾಲಿ ಇರುವ ಶೇಕಡ 31 ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ಶೇ 40ರಷ್ಟು ಫಿಟ್ಮೆಂಟ್ ಸೌಲಭ್ಯ 2022ರ ಜುಲೈ 1 ರಿಂದ ಜಾರಿಗೆ ತರಬೇಕು. ಕೇಂದ್ರ ಸರ್ಕಾರದ ಮಾದರಿಯಲ್ಲಿ 4 ವರ್ಷಕ್ಕೊಮ್ಮೆ ಎಲ್.ಟಿ.ಸಿ. ಸೌಲಭ್ಯ, ದಿನದ ಬಗ್ಗೆ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ವಿವಾಹಿತ ಮಹಿಳಾ ನೌಕರರ ತಂದೆ, ತಾಯಿ ಸೇರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸೇರಿದಂತೆ ಇತರೆ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.