i
ಕೋಡಿಮಠದ ಶ್ರೀಗಳ ಸ್ಫೋಟಕ ರಾಜಕೀಯ ಭವಿಷ್ಯ, ಎಲ್ಲ ಪಕ್ಷಗಳು ಛಿದ್ರ ಆದರೂ ಒಂದು ಪಕ್ಷ ಅಧಿಕಾರಕ್ಕೆ…
ಚಂದ್ರವಳ್ಳಿ ನ್ಯೂಸ್, ಹಾಸನ:
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ. ರಾಜಕೀಯದಲ್ಲಿ ಇನ್ನೂ ದಾಳಗಳಿವೆ, ಹಲವು ಗೊಂದಲಗಳಿವೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ರಾಜಕೀಯ ಪಕ್ಷಗಳು ಒಡೆಯುತ್ತೆ ಚುನಾವಣೆ ನಡೆದ್ರೂ ಪಕ್ಷ ಒಡೆಯುತ್ತವೆ. ಯುಗಾದಿ ನಂತರ ಯಾರು ರಾಜ್ಯದ ಸಿಎಂ ಯಾರು ಆಗುತ್ತಾರೆಂದು ತಿಳಿಸುವೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಹೇಳಿದ್ದಾರೆ.