i
ಮೃತ ಅನಾಮಧೇಯ ವ್ಯಕ್ತಿಯ ಶವ ಪತ್ತೆ, ವಾರಸುದಾರರ ಪತ್ತೆಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಈರಜನಹಟ್ಟಿ ಗೇಟ್ ಬಳಿ ಸುಮಾರು 35 ರಿಂದ 40 ವರ್ಷದ ಪುರುಷ ಮೃತಪಟ್ಟಿರುವ ಪ್ರಕರಣ ಫೆಬ್ರವರಿ 18 ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ಅನಾಮಧೇಯ ಪುರುಷನ ಚಹರೆ ಇಂತಿದೆ. ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಸುಮಾರು ಅರ್ಧ ಇಂಚು ಉದ್ದದ ಕಪ್ಪು ಕೂದಲು, ಕೊರಳಲ್ಲಿ ಚಿಕ್ಕ ರುದ್ರಾಕ್ಷಿ ಸರ ಹಾಗೂ ಬಲಗೈ ರಟ್ಟೆಗೆ ಕೆಂಪು ಬಣ್ಣದ ಧಾರ ಕಟ್ಟಿಕೊಂಡಿರುತ್ತಾನೆ. ಎರಡು ಕೈಗಳ ಮೇಲೆ ಹಿಂದಿ ಭಾಷೆಯ ಅಕ್ಷರಕ್ಕೆ ಹೋಲಿಕೆಯಾಗುವ ಅಚ್ಚೆ ಇರುತ್ತದೆ. ಮೈ ಮೇಲೆ ಬಿಳಿ ಬಣ್ಣದ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್, ಕಾಫಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.