i
5 ಮತ್ತು 8 ನೇ ತರಗತಿಗಳಿಗೆ ಮಾರ್ಚ್ 13 ರಿಂದ ಪಬ್ಲಿಕ್ ಪರೀಕ್ಷೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Public Exams
ಪ್ರಸಕ್ತ 2023-24ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪಬ್ಲಿಕ್ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.
ಮಾರ್ಚ್ 13ರಿಂದ ಆರಂಭವಾಗಲಿರುವ ಪರೀಕ್ಷೆಗಳು 18ರವರೆಗೆ ನಡೆಯಲಿವೆ. ಯಾವ ಪರೀಕ್ಷೆ?
8ನೇ ತರಗತಿಗೆ ಮಾರ್ಚ್-13 ಪ್ರಥಮ ಭಾಷೆ, ಮಾರ್ಚ್-14 ದ್ವೀತಿಯ ಭಾಷೆ, ಮಾರ್ಚ್-15 ತೃತೀಯ ಭಾಷೆ, ಮಾರ್ಚ್-16 ಗಣಿತ, ಮಾರ್ಚ್-17 ವಿಜ್ಞಾನ, ಮಾರ್ಚ್-18 ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆಗಳು ನಡೆಯಲಿವೆ.
5ನೇ ತರಗತಿಗೆ ಮಾರ್ಚ್-15 ಪ್ರಥಮ ಭಾಷೆ, ಮಾರ್ಚ್-16 ಗಣಿತ, ಮಾರ್ಚ್- 17 ಪರಿಸರ ಅಧ್ಯಯನ, ಮಾರ್ಚ್-18 ದ್ವೀತಿಯ ಭಾಷೆಗೆ ಪರೀಕ್ಷೆ ನಡೆಯಲಿವೆ.
ಮಾಹಿತಿಗಾಗಿ ಸಂಪರ್ಕಿಸಿ- ನವೋದಯ ಮೊರಾರ್ಜಿ ತರಬೇತಿ ಕೇಂದ್ರ ಹಿರಿಯೂರು ವತಿಯಿಂದ ಸೂಕ್ತ ಮಾರ್ಗದರ್ಶನ ದೊರೆಯಲಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳೇ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆಯನ್ನು ಹಾಗೂ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶನಿವಾರ ಮಧ್ಯಾಹ್ನ 4 ಘಂಟೆಯಿಂದ 7 ರವರೆಗೆ ತರಗತಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 10 ರಿಂದ 4 ರವರೆಗೆ ತರಗತಿ ನಡೆಯಲಿದೆ ಎಂದು ಮಾರ್ಗದರ್ಶನ ಶಿಕ್ಷಕಿ ಹೇಮಲತ ತಿಳಿಸಿದರು.
ವಿಶೇಷ ಸೂಚನೆ: 1) ಐದನೆ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಹ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ
2 ) ಮೊರಾರ್ಜಿ + ಪಬ್ಲಿಕ್ ಪರೀಕ್ಷೆಯ ತರಬೇತಿಗಾಗಿ ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9686194485