i
ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಪ್ರಯಾಣ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯರು ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಹಾಗೂ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಭಾಗವಹಿಸಲು ಸುರಕ್ಷಿತ, ಉತ್ತಮ ಭದ್ರತೆಯುಳ್ಳ ಸಾರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಆರ್ಥಿಕವಾಗಿ ಶಕ್ತಿಯನ್ನು ತುಂಬಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8 ರಂದು ಬೆಂಗಳೂರು ನಗರದ ಮಹಿಳೆಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ.
ಈ ಉಚಿತ ಸೇವೆ ಪ್ರಯಾಣವು ಸಂಸ್ಥೆಯ ಹವಾನಿಯಂತ್ರಿತ ವಜ್ರ & ವಾಯುವಜ್ರ ಸೇವೆಗಳಿಗೆ ಸಹ ಅನ್ವಯಿಸುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಮತ್ತು ಹೊರವಲಯ ಪ್ರದೇಶದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಥ, ಸುರಕ್ಷಿತ, ವಿಶ್ವಾಸಾರ್ಹ, ದಕ್ಷ, ಸಮರ್ಪಕ, ಉತ್ತಮ ಹಾಗೂ ಮಿತವ್ಯಯ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ಪ್ರಸ್ತುತ ಸಂಸ್ಥೆಯು 48 ಘಟಕಗಳು, 50 ಬಸ್ ನಿಲ್ದಾಣಗಳು ಹಾಗೂ 6600 ವಾಹನ ಬಲವನ್ನು ಹೊಂದಿದ್ದು, ಪ್ರತಿದಿನ 5567 ಬಸ್ಸುಗಳಿಂದ, 54 ಸಾವಿರ ಸುತ್ತುವಳಿಗಳೊಂದಿಗೆ, 10.84 ಲಕ್ಷ ಕಿ.ಮೀಗಳನ್ನು ಕ್ರಮಿಸಿ ಸರಾಸರಿ 29.00 ಲಕ್ಷ ಪ್ರಯಾಣಿಕರಿಗೆ ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.