i
ಹಿರಿಯೂರು ಎಳನೀರು ಮಾರಾಟ, ನೆಲವಳಿ ಸುಂಕ ವಸೂಲಿಗೆ ಹರಾಜು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ 2023-24 ನೇ ಸಾಲಿಗೆ ಒಂದು ವರ್ಷದ ಅವಧಿಗೆ ನೆಲವಳಿ ಸುಂಕ ವಸೂಲಿ ಹಕ್ಕು, ಎಳನೀರು ಮಾರಾಟದ ಹಕ್ಕು, ಫಸಲು ರೂಢಿಸಿಕೊಳ್ಳುವ ಹಕ್ಕು ನೀಡಲು ಹರಾಜು ಇಸ್ತಿಹಾರ್ ಅನ್ನು ಮಾ. 16 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭಾ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹರಾಜಿನಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಗರಸಭೆ ಕಾರ್ಯಾಲಯದಿಂದ ಪಡೆಯಬಹುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.