i
ಮೃತ ವಾರಸುದಾರರ ಪತ್ತೆಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 28 ರಿಂದ 30 ವರ್ಷದ ಅನಾಮಧೇಯ ವ್ಯಕ್ತಿಯು ಮೃತಪಟ್ಟಿರುವ ಪ್ರಕರಣ ಮಾರ್ಚ್ 7 ರಂದು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ಅನಾಮಧೇಯ ವ್ಯಕ್ತಿಯು ಸುಮಾರು 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲು ಮುಖ, ಸುಮಾರು 3 ಇಂಚು ಉದ್ದದ ಬಿಳಿ ಮತ್ತು ಕಪ್ಪು ಬಣ್ಣದ ತಲೆ ಕೂದಲು, ಕಪ್ಪು ಮೈಬಣ್ಣ ಹಾಗೂ ಮುಖದಲ್ಲಿ ಬಳಿ ಹಾಗೂ ಕಪ್ಪು ಬಣ್ಣದ ಕುರುಚಲು ಗಡ್ಡ ಹೊಂದಿರುತ್ತಾರೆ. ಮೈಮೇಲೆ ಡಿಸ್ಟಂಪರ್ ಬಣ್ಣದ ತುಂಬು ತೋಳಿನ ಶಾರ್ಟ್ ಹಾಗೂ ಮಾಸಲು ಬಣ್ಣದ ಬಿಳಿ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.