i
ಜೆಸಿಬಿ ಹಾಗೂ ಲಘು ವಾಹನ ಚಾಲನ ತರಬೇತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಾಂಡೇಲಿ ಹಾಗೂ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಎಸ್.ಇ.ಟಿ.ಐ ತರಬೇತಿ ಸಂಸ್ಥೆ ವತಿಯಿಂದ ಉಚಿತವಾಗಿ ಜೆ.ಸಿ.ಬಿ. ಹಾಗೂ ಲಘು ವಾಹನ ಚಾಲನ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಟೋಪಚಾರ ಹಾಗೂ ವಸತಿಯೊಂದಿಗೆ 30 ದಿನಗಳ ಕಾಲ ಚಾಲನ ತರಬೇತಿ ನೀಡಲಾಗುವುದು. 20 ರಿಂದ 45 ವಯಸ್ಸಿನ ನಿರುದ್ಯೋಗಿ ಯುವಕರಿಗೆ ಲಘುವಾಹನ ತರಬೇತಿ ಹಾಗೂ 18 ರಿಂದ 45 ವಯಸ್ಸಿನ ನಿರುದ್ಯೋಗಿ ಯುವಕರಿಗೆ ಜೆ.ಸಿ.ಬಿ. ತರಬೇತಿ ನೀಡಲಾಗುವುದು. ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ಸೌಲಭ್ಯ ಲಭ್ಯವಿದೆ. ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೆÇೀಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಏಪ್ರಿಲ್ 25 ರೊಳಗೆ ದೇಶಪಾಂಡೆ ಆರ್ಸೆಟಿ(ಆರ್) ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ವಿಳಾಸಕ್ಕೆ ಸಲ್ಲಿಸಬಹುದು. ವಾಟ್ಸಪ್ ಮೂಲಕ ಮೊಬೈಲ್ ಸಂಖ್ಯೆ 08284-298547, 9449782425, 9632143217 ಅರ್ಜಿ ಸಲ್ಲಿಸಬಹುದಾಗಿದೆ.