
ಸಮುದ್ರದಹಳ್ಳಿ ನಿವಾಸಿ, ಕಾಲೇಜ್ ವಿದ್ಯಾರ್ಥಿ ಶಶಾಂಕ್ ದಾವಣಗೆರೆಯಲ್ಲಿ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಸಮುದ್ರದಹಳ್ಳಿಯ ವಿದ್ಯಾರ್ಥಿಯೊರ್ವ ದಾವಣಗೆರೆಯಲ್ಲಿ ನಾಪತ್ತೆ ಆಗಿದ್ದಾನೆ.
ನರಸಿಂಹಮೂರ್ತಿ ಮತ್ತು ಪದ್ಮಾವತಿಯ ಪುತ್ರನಾದ ಎನ್.ಪಿ.ಶಶಾಂಕ್(18) ದಾವಣಗೆರೆಯ ಸಿದ್ದಗಂಗಾ ಕಾಲೇಜ್ ನಲ್ಲಿ 2ನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿ ಶಶಾಂಕ್ ನಾಪತ್ತೆ ಆಗಿದ್ದು ಕುಟುಂಬಸ್ಥರಲ್ಲಿ ಆತಂಕ ಸೃಷ್ಠಿಯಾಗಿದ್ದು ಪುತ್ರ ಎಲ್ಲೇ ಇದ್ದರೂ ಕೂಡಲೇ ಮನೆ ಬರುವಂತೆ ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲ ಯಾರಿಗಾದರೂ ಸುಳಿವು ಸಿಕ್ಕರೆ ಪೋಟೋದಲ್ಲಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಪೋಷಕರು ಮನವಿ ಮಾಡಿದ್ದಾರೆ.