
ಅಧ್ಯಕ್ಷ ಉಪಾಧ್ಯಕ್ಷರುಗಳ ಮೀಸಲಾತಿ ಪ್ರಕಟಿಸದ ಸರ್ಕಾರದ ನೀತಿಗೆ ಖಂಡನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪ್ರಥಮ ಮೀಸಲಾತಿ ಅವಧಿ ಏಪ್ರಿಲ್ ಅಂತ್ಯಕ್ಕೆ ಮುಕ್ತಾಯವಾಗುತ್ತದೆ, ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ನೀತಿ ಪಾಠ ಹೇಳಿ ಮುಂಚೆ ಮೀಸಲಾತಿಯನ್ನು ಪ್ರಕಟಿಸಲು ನಿರ್ದೇಶನ ನೀಡಲಾಗಿತ್ತು. ಈ ಬಗ್ಗೆ ನಾನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳನ್ನು ಕೇಳಿದಾಗ ಅವರು ಏನು ಉತ್ತರ ನೀಡಲಿಲ್ಲ.
ಈ ತಿಂಗಳು 27 ಅಥವಾ 28ರ ಒಳಗೆ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿ ಮಾಡುತ್ತದೆ. ಅದನ್ನು ರಾಜ್ಯ ಸರ್ಕಾರ ನೆಪ ಮಾಡಿಕೊಂಡು ಕರ್ನಾಟಕ ಪೌರಸಭೆಗಳ ಅಧಿನಿಯಮ 1964. 42 (5) ರ ಅನ್ವಯ ಪಟ್ಟಣ ಪಂಚಾಯಿತಿಗೆ ತಹಶೀಲ್ದಾರರನ್ನು, ಪುರಸಭೆಗೆ ಅಸಿಸ್ಟಂಟ್ ಕಮಿಷನರ್ ಗಳನ್ನು ಮತ್ತು ನಗರಸಭೆಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರ ಕರ್ತವ್ಯವನ್ನು ಮಾಡಲು ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ.
ಮತ್ತೆ ಹೊಸ ಸರ್ಕಾರ ಬಂದಾಗ ಅದೆಷ್ಟು ಸಮಯ ತೆಗೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್ ನಾರಾಯಣಾಚಾರ್.