i
ಉಂಗುರು ನುಂಗಿ 8 ತಿಂಗಳ ಮಗು ಧಾರುಣ ಸಾವು, ಪೋಷಕರ ಆಕ್ರಂಧನ…
ಚಂದ್ರವಳ್ಳಿ ನ್ಯೂಸ್, ಕೊಡಗು:
8 ತಿಂಗಳ ಮಗುವೊಂದು ತನ್ನ ಕೈ ಬೆರಳಿಗೆ ಹಾಕಿದ್ದ ಆ ಮಗುವಿನ ತಾಯಿಯ ಉಂಗುರ ನುಂಗಿ ಸಾವನ್ನಪ್ಪಿದ ದುರ್ಘಟನೆ ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ ಸಂಭವಿಸಿದೆ.
8 ತಿಂಗಳ ಮಗುವಿನ ಬೆರಳಿಗೆ ಹಾಕಿದ್ದ ಉಂಗುರವನ್ನು ಕಚ್ಚಿಕೊಳ್ಳುತ್ತಾ ಆಟವಾಡುತ್ತಿತ್ತು. ಇದನ್ನು ಪ್ರತಿನಿತ್ಯ ನೋಡುತ್ತಿದ್ದ ಪಾಲಕರು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಮಗುವಿನ ಬೆರಳಿನಲ್ಲಿ ಇದ್ದ ಉಂಗುರ ಬಿಚ್ಚಿಕೊಂಡಿದ್ದು, ಗಂಟಲಿಗೆ ಸೇರಿಕೊಂಡಿದೆ. ನಂತರ ಉಸಿರಾಟ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಕರಡಿಗೋಡು ಗ್ರಾಮದ ಮುನೀರ್(8 ತಿಂಗಳು) ಎನ್ನುವ ಉಸಿರಾಟ ಸಮಸ್ಯೆ ಅನುಭವಿಸುತ್ತಿಯತ್ತು. ತಕ್ಷಣವೇ ಪೋಷಕರು ಮಗುವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಕೂಡ ಮಗುವನ್ನು ಉಳಿಸುವ ನಿಟ್ಟಿನಲ್ಲಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ಉಂಗುರ ತೆಗೆದಿದ್ಧರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಮಗು ಸಾವನ್ನಪ್ಪಿದೆ.